ನಮ್ಮೊಂದಿಗೆ ಕೆಲಸ ಮಾಡಿ

work with us

ಫೌಂಡೇಷನ್‌ನಲ್ಲಿ ನಿಮಗೆ ಹಲವು ಆಸಕ್ತಿಕರ ವೃತ್ತಿ ಅವಕಾಶಗಳಿವೆ

ಪ್ರತಿಯೊಂದು ಪಾತ್ರವೂ ವೃತ್ತಿಪರ ತೃಪ್ತಿ ಹಾಗೂ ಸಾಮಾಜಿಕ ಬದ್ಧತೆ ಮತ್ತು ಉದ್ದೇಶಗಳ ಸಮ್ಮಿಳನಕ್ಕೆ ಅವಕಾಶ ಕಲ್ಪಿಸುತ್ತದೆ.

ಫೌಂಡೇಷನ್‌ನಲ್ಲಿ ವೃತ್ತಿ ಅವಕಾಶಗಳು

ಫೌಂಡೇಷನ್‌ನ ಪ್ರತಿಯೊಂದು ಪಾತ್ರದಲ್ಲಿಯೂ ಸಾಮಾಜಿಕ ಬದ್ಧತೆ ಹಾಗೂ ಉತ್ಕೃಷ್ಟತೆಯತ್ತ ಕೊಂಡೊಯ್ಯುವ ವೃತ್ತಿಪರ ಚಾಲನೆ ಹಾಗೂ ಅರ್ಥಪೂರ್ಣ ಕೆಲಸಗಳು ಜೊತೆಜೊತೆಗೆ ಕಾಣಿಸಿಕೊಳ್ಳುತ್ತವೆ. ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣೆಯ ಕ್ಷೇತ್ರದಲ್ಲಿ ನಮ್ಮ ವಿಸ್ತಾರವಾದ ಹಾಗೂ ವ್ಯಾಪಕವಾದ ತೊಡಗುವಿಕೆಯು ಕೌಶಲ್ಯ ಮತ್ತು ಬದ್ಧತೆಗಳುಳ್ಳ, ಜ್ಞಾನ ಹೊಂದಿದ ಹಾಗೂ ಸಾಮಾಜಿಕ ಪ್ರಜ್ಞೆಯುಳ್ಳ ಕಾರ್ಯಕರ್ತರನ್ನು ಅಪಾರ ಸಂಖ್ಯೆಯಲ್ಲಿ ಬಯಸುತ್ತದೆ.

ನಮ್ಮ ಕಾರ್ಯನಿರ್ವಹಣೆಯ ಪ್ರದೇಶಗಳು ಭಾರತದಾದ್ಯಂತ ವಿಸ್ತರಿಸಿಕೊಂಡಿದ್ದು, ಕೆಲವು ಅತ್ಯಂತ ಸವಾಲಿನ ಹಾಗೂ ತಲುಪಲು ಕಷ್ಟವಾದ ಸ್ಥಳಗಳನ್ನು ಕೂಡ ಒಳಗೊಂಡಿದೆ. ಇದು ಅನೇಕ ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ ಹಾಗೂ ಇತರ ಪ್ರಾದೇಶಿಕ ವೈವಿಧ್ಯತೆಗಳಿಗೆ ನಮ್ಮನ್ನು ಅನನ್ಯವಾದ ರೀತಿಯಲ್ಲಿ ಪರಿಚಯಿಸುತ್ತದೆ. ಬೆಂಬಲ ನೀಡುವವರು (ಎನೇಬ್ಲರ್ಸ್), ಶಿಕ್ಷಕರು, ಸಂಶೋಧಕರು, ಅನುವಾದಕರು ಅಥವಾ ಕ್ಷೇತ್ರದಲ್ಲಿನ ಅಸೋಸಿಯೇಟ್ ಗಳು ಈ ಎಲ್ಲರ ಪಾತ್ರಗಳನ್ನೂ ಹಾಗೂ ಜವಾಬ್ದಾರಿಗಳನ್ನು ಬೆಸೆದಿರುವ ಏಕಮಾತ್ರ ಸೂತ್ರವೆಂದರೆ ಅದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣದ ಕಾಣ್ಕೆಗೆ ಫೌಂಡೇಷನ್ ಹೊಂದಿರುವ ಬದ್ಧತೆಯಾಗಿದೆ.

careers

ನೀವು ಅತ್ಯುತ್ಸಾಹದ ಮತ್ತು ಅತ್ಯುತ್ತಮ ಅರ್ಹತೆಯುಳ್ಳ ಸದಸ್ಯರ ತಂಡದೊಂದಿಗೆ ತೊಡಗಿಸಿಕೊಳ್ಳುತ್ತೀರಿ. ವಿವಿಧ ಹಿನ್ನೆಲೆಗಳು, ಸಂಸ್ಕೃತಿಗಳು ಮತ್ತು ಪರಿಣಿತಿಯ ಕ್ಷೇತ್ರಗಳಿರುವ ಜನರು ಒಂದು ಸಾಮಾನ್ಯ ಉದ್ದೇಶದಿಂದ ಒಂದಾಗಿರುವ ಬಹು ವೈವಿಧ್ಯದ ಪರಿಸರದ ಅನುಭವವನ್ನು ಪಡೆಯುತ್ತೀರಿ.

ಇದು ಒಂದು ಕಲಿಯುವ, ಓದುವ, ಪ್ರತಿಫಲಿಸುವ, ಹಾಗೂ ಶಿಕ್ಷಣ, ಅಭಿವೃದ್ಧಿ, ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪರಿಕಲ್ಪನೆಗಳೊಂದಿಗೆ ತೊಡಗಿಸಿಕೊಳ್ಳುವ ಸಂಸ್ಕೃತಿ.

ನಮ್ಮ ವೃತ್ತಿ ಪರಿಸರದಲ್ಲಿ, ಪ್ರತಿಯೊಬ್ಬ ಸದಸ್ಯರ ವೈಯಕ್ತಿಕ ಬೆಳವಣಿಗೆ ಮತ್ತು ಕ್ಷೇಮಗಳ ಪೋಷಣೆಯ ಜೊತೆಗೆ ವಿಸ್ತೃತ ಸಂಭಾವನೆಯ ಪ್ಯಾಕೇಜ್‌ ಕೂಡ ಇದೆ.

ನೀವು ಸಮಾಜಕ್ಕೆ ಕೊಡುಗೆ ನೀಡಲು ಸಿದ್ಧರಿದ್ದೀರ? ಬನ್ನಿ, ನಮ್ಮ ಕ್ಷೇತ್ರ ಕಾರ್ಯದ ತಂಡವನ್ನು ಸೇರಿರಿ

ಕ್ಷೇತ್ರ ಕಾರ್ಯದಲ್ಲಿ ಇರುವ ಉದ್ಯೋಗಾವಕಾಶಗಳಿಗೆ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ಉತ್ಸಾಹವಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ.

ದಯವಿಟ್ಟು ಗಮನಿಸಿ:
  • ಅಜೀಂ ಪ್ರೇಮ್‌ಜಿ ಶಾಲೆಗಳಿಗೆ ಶಿಕ್ಷಕರು

ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿರುವ ಉತ್ತಮ ಗುಣಮಟ್ಟದ K-12 ಶಿಕ್ಷಣ ನೀಡಿ | ಮತ್ತಷ್ಟು ತಿಳಿಯಿರಿ ಮತ್ತು ಅರ್ಜಿ ಸಲ್ಲಿಸಿ 

  • ಸಂಪನ್ಮೂಲ ವ್ಯಕ್ತಿಶಾಲಾ ಶಿಕ್ಷಣ | ಮತ್ತಷ್ಟು ತಿಳಿಯಿರಿ ಮತ್ತುಅರ್ಜಿ ಸಲ್ಲಿಸಿ

ತಳಸ್ತರದಲ್ಲಿ ಕೆಲಸ ಮಾಡಿ ಸರ್ಕಾರಿ ಶಾಲಾ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸಲು ಸಹಕರಿಸಿ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜೊತೆಗೆ ಕೆಲಸ ಮಾಡಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಉತ್ತಮಗೊಳಿಸಲು ಸಹಕರಿಸಿ

  • ಸಂಪನ್ಮೂಲ ವ್ಯಕ್ತಿ – ಜೀವನೋಪಾಯಗಳು | ಮತ್ತಷ್ಟು ತಿಳಿಯಿರಿ ಮತ್ತು ಅರ್ಜಿ ಸಲ್ಲಿಸಿ

ಸೆಂಟ್ರಲ್‌ ಆದಿವಾಸಿ ಬೆಲ್ಟ್‌ನಲ್ಲಿ ಕೆಲಸ ಮಾಡಿ ಅಲ್ಲಿನ ಕುಟುಂಬಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಕರಿಸಿ

ಶಾಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿ – ಶಾಲಾ ಶಿಕ್ಷಣ ಸ್ಥಾನಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಪ್ರತಿ ಶನಿವಾರ ನಡೆಯುವ ನಮ್ಮ ಆನ್‌ಲೈನ್‌ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಫೌಂಡೇಷನ್ ನಲ್ಲಿ ಜೀವನ

ಹೆಚ್ಚು ನ್ಯಾಯಯುತ, ಸಮಾನ, ಮಾನವಿಕಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕೆಕೊಡುಗೆ ನೀಡಲು, ನಾವು ಅತ್ಯಂತಅವಕಾಶರಹಿತ ಮತ್ತು ಅತ್ಯಂತ ಕಡಿಮೆಬೆಂಬಲ ಇರುವ ಪ್ರದೇಶಗಳಲ್ಲಿ ಕೆಲಸಮಾಡುತ್ತೇವೆ. ನಮ್ಮ ಉದ್ದೇಶದ ಆಳವಾದ ಪ್ರಜ್ಞೆ ಮತ್ತು ನಾವು ಸೇವೆ ಮಾಡುವ ಸಮುದಾಯಗಳಲ್ಲಿ ಒಂದು ಧನಾತ್ಮಕ ಬದಲಾವಣೆಯನ್ನು ತರಲು ಇರುವ ಬದ್ಧತೆಗಳಿಂದ ನಾವು ಪ್ರೇರೇಪಿಸಲ್ಪಟ್ಟಿದ್ದೇವೆ.

ನಮ್ಮ ಚಟುವಟಿಕೆಗಳು ಹಾಗೂ ಮಧ್ಯಪ್ರವೇಶಗಳ ವ್ಯಾಪ್ತಿ ಹಾಗೂ ದೇಶದಾದ್ಯಂತ ಇರುವ ನಮ್ಮ ವ್ಯಾಪಕ ಕಾರ್ಯ ಚಟುವಟಿಕೆಗಳಿಂದಾಗಿ ನಮ್ಮ ತಂಡಗಳು ಹಲವಾರು ಸಾಮರ್ಥ್ಯಗಳನ್ನು ಹಾಗೂ ವಿವಿಧ ಮಟ್ಟಗಳ ಅನುಭವವನ್ನು ಹೊಂದಿರುವ ಸದಸ್ಯರುಗಳನ್ನು ಒಳಗೊಂಡಿದೆ. ನಮ್ಮ ತಂಡಗಳು ತಮ್ಮ ಅವಿರತ ಕಾರ್ಯ ಹಾಗೂ ಪರಿಶ್ರಮಗಳ ಮೂಲಕ ಫೌಂಡೇಷನ್‌ನ ಪ್ರತಿಯೊಂದು ಕಾರ್ಯಕ್ಕೂ ನೆರವು ನೀಡುತ್ತವೆ.

ಕ್ಷೇತ್ರ ಮಟ್ಟದಲ್ಲಿ ನಮ್ಮ ಸಂಪನ್ಮೂಲ ವ್ಯಕ್ತಿಗಳು ಹಾಗೂ ಬೆಂಬಲ ಒದಗಿಸುತ್ತಿರುವವರಿಂದ ಹಿಡಿದು ಅಜೀಂ ಪ್ರೇಮ್‌ಜಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಅಥವಾ ನಮ್ಮ ಅನುವಾದಕರಿಂದ ಹಿಡಿದು ನಮ್ಮ ಸಂಶೋಧಕರವರೆಗೂ ಪ್ರತಿಯೊಬ್ಬ ಸದಸ್ಯರಿಗೂ ಸಹ ನಮ್ಮ ಫೌಂಡೇಷನ್‌ನ ಲ್ಲಿ ಸ್ಪಷ್ಟವಾಗಿ ನಿರೂಪಿಸಲಾದ ಪಾತ್ರವಿದೆ. ಕೌಶಲ್ಯಗಳು ಹಾಗೂ ಜ್ಞಾನ, ಸಾಮರ್ಥ್ಯಗಳು ಹಾಗೂ ಪದವಿಗಳು ಇವುಗಳನ್ನು ಹೊಂದಿರುವುದು ಮಾತ್ರವಲ್ಲದೆ ನಮ್ಮ ಸದಸ್ಯರು ಸಾಮಾಜಿಕ ಧ್ಯೇಯದಿಂದಲೂ ಸಹ ಕ್ರಮಿಸಬೇಕಿರುವ ಮಾರ್ಗದ ಬಗ್ಗೆ ಸ್ಪಷ್ಟತೆ ಹೊಂದಿ ಪ್ರೇರಿತರಾಗಿದ್ದಾರೆ.

ಬದುಕಿನ ಒಂದು ದಿನ…

ಫೌಂಡೇಷನ್‌ನಲ್ಲಿ ವಹಿಸಿಕೊಳ್ಳುವ ಪ್ರತಿಯೊಂದು ಪಾತ್ರವೂ ಹಾಗೂ ಮಾಡುವ ಪ್ರತಿಯೊಂದು ಕೆಲಸವೂ ಸಹ, ಸಾಮಾಜಿಕವಾಗಿ ಜಾಗರೂಕವಾಗಿರುವ ಹಾಗೂ ಸಾಂಸ್ಕೃತಿಕವಾಗಿ ವೈವಿಧ್ಯಮಯ ಹಿನ್ನೆಲೆಗಳುಳ್ಳ ಉದ್ಯೋಗಿಗಳ ಜೊತೆ ಕೆಲಸ ಮಾಡುವ ಹೆಚ್ಚುವರಿ ಪ್ರೋತ್ಸಾಹಕದೊಂದಿಗೆ ಬರುತ್ತದೆ. ಈ ಅನುಭವಕ್ಕೆ ತೆರೆದುಕೊಳ್ಳುವುದು ನಮ್ಮ ಸದಸ್ಯರುಗಳಿಗೆ ಒಂದು ಅನನ್ಯವಾದ ಜೀವನ ಕೌಶಲಗಳು ಹಾಗೂ ದೃಷ್ಟಿಕೋನವನ್ನು ನೀಡುತ್ತದೆ.

ಈ ವಿಭಾಗದ ಮೂಲಕ ನಾವು ನಮ್ಮೊಡನೆ ಕೆಲಸ ಮಾಡುವ ಹಲವಾರು ಜನರನ್ನು ಭೇಟಿಯಾಗಿ ಅವರ ಕೆಲಸದ ದಿನವೊಂದು ಹೇಗಿರುತ್ತದೆ ಎಂಬ ಬಗ್ಗೆ ಒಂದು ಸ್ಥೂಲನೋಟವನ್ನು ಪಡೆದುಕೊಳ್ಳುತ್ತೇವೆ. ಇದು ಅವರ ಜಗತ್ತು, ಅವರ ಪ್ರಪಂಚ, ಕೆಲಸ, ಕಲಿಕೆಗಳು ಹಾಗೂ ಅವರ ಅನುಭವಗಳ ಕುರಿತು ಇದು ಒಂದು ಅರಿವಿನ ಕಿಂಡಿಯಾಗಿದೆ.

ಹುಡುಕಿ ಮತ್ತು ಕೆಲಸಗಳಿಗೆ ಅರ್ಜಿ ಸಲ್ಲಿಸಿ

ನಿಮ್ಮ ಕೌಶಲಗಳು ಹಾಗೂ ಉದ್ದೇಶಕ್ಕೆ ಸೂಕ್ತವಾಗಿ ಹೊಂದುವ ಉದ್ಯೋಗವನ್ನು ಕಂಡುಕೊಳ್ಳಿ. ಕೇತ್ರ ಘಟಕ, ಆರೋಗ್ಯ, ಅನುದಾನಗಳು, ಜೀವನೋಪಾಯಗಳು, ವಿಶ್ವವಿದ್ಯಾಲಯ ಮತ್ತು ಎನೇಬ್ಲಿಂಗ್‌ ಫಂಕ್ಷನ್‌ಗಳಲ್ಲಿ ಇರುವ ಹಲವು ಅವಕಾಶಗಳನ್ನು ನೋಡಿ ಅರ್ಜಿ ಸಲ್ಲಿಸಿ.

Field, Health, Grants, Livelihoods, University and Enabling Functions

Azim Premji Scholarship

ಅನುಮೋದನೆ

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.