ಅನುದಾನಕ್ಕಾಗಿ ಅರ್ಜಿ ಸಲ್ಲಿಸಿ

applyforgrants

ಫೌಂಡೇಷನ್‌ನಿಂದ ಅನುದಾನವನ್ನು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು ಆಸಕ್ತಿ ತೋರಿದ ನಿಮಗೆ ಧನ್ಯವಾದಗಳು

ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ದಯವಿಟ್ಟು ಕೆಳಗೆ ನೀಡಿರುವ ಮಾಹಿತಿಯನ್ನು ಓದಿರಿ. ನಮ್ಮ ಸಮಾಜದ ಅತ್ಯಂತ ದುರ್ಬಲ ಹಿನ್ನೆಲೆಯುಳ್ಳ ಜನರೊಂದಿಗೆ ಕೆಲಸ ಮಾಡುತ್ತಿರುವ ಲಾಭೋದ್ದೇಶರಹಿತ ಸಂಸ್ಥೆಗಳಿಗೆ ನಾವು ಬಹು-ವಾರ್ಷಿಕ ಅನುದಾನಗಳನ್ನು ನೀಡುತ್ತೇವೆ.

ಅನುದಾನಕ್ಕಾಗಿ ನಾವು ಅನುಸರಿಸುವ ವಿಧಾನ ಮತ್ತು ಕ್ಷೇತ್ರಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ಇಲ್ಲಿ ಇಲ್ಲಿ ಕ್ಲಿಕ್‌ 

ಅರ್ಜಿ ಸಲ್ಲಿಸುವ ಬಗೆ

  • ನಿಮ್ಮ ಸಂಸ್ಥೆಯ ಕುರಿತ ಸಂಕ್ಷಿಪ್ತ ವಿವರ ಮತ್ತು ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಾಗಿ ದಯವಿಟ್ಟು NGO Registration Form  ಅನ್ನು ಬಳಸಿರಿ.
  • ಒಂದು ವೇಳೆ ನಿಮ್ಮ ಸಂಸ್ಥೆಯ ವಿವರಗಳನ್ನು ಸರಿಯಾಗಿ ನಮೂದಿಸಿದ್ದರೆ ಹಾಗೂ ನಿಮ್ಮ ಇಮೇಲ್‌ ವಿಳಾಸವು ಸರಿಯಾಗಿದ್ದರೆ, ಮೂರು ಕೆಲಸದ ದಿನಗಳೊಳಗಾಗಿ ನಮ್ಮ ಅನುದಾನ ನಿರ್ವಹಣೆ ಪೋರ್ಟಲ್‌ನಿಂದ ಲಾಗಿನ್‌ ವಿವರಗಳನ್ನು ನೀವು ಪಡೆಯಲಿದ್ದೀರಿ.

ಚಿತ್ರ ಕ್ರೆಡಿಟ್: ಪಾಲುದಾರ ಸಂಸ್ಥೆ, ಅಜೀಂ ಪ್ರೇಮ್‌ಜಿ ಫೌಂಡೇಶನ್

  • ಈ ಪ್ರಕ್ರಿಯೆಯ ಕುರಿತು ನಿಮಗೆ ಯಾವುದೇ ನೆರವು ಬೇಕಾದಲ್ಲಿ ದಯವಿಟ್ಟು [email protected] ಗೆ ಬರೆಯಿರಿ.
  • ನಮ್ಮ ಅನುದಾನ ನಿರ್ವಹಣೆ ಪೋರ್ಟಲ್‌ನಲ್ಲಿ ಒಮ್ಮೆ ನೀವು ಲಾಗಿನ್‌ ಆದ ನಂತರ, ನಿಮ್ಮ ಸಂಸ್ಥೆಯ ವಿವರಗಳನ್ನು ನೀವು ನೋಡಲು ಮತ್ತು ತಿದ್ದಲು ಸಾಧ್ಯ. ನಿಮ್ಮ ಅನುದಾನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನೀವು ನೋಡಿ ಅದನ್ನು ನಿರ್ವಹಿಸಬಹುದು.

ಗಮನಿಸಿ: ಎನ್‌.ಜಿ.ಒ ನೋಂದಣಿ ನಮೂನೆಯಲ್ಲಿ ಅತ್ಯುತ್ತಮ ಸೈಟ್‌ ಅನುಭವವನ್ನು ಪಡೆಯುವುದಕ್ಕಾಗಿ ಲ್ಯಾಪ್ಟಾಪ್‌ ಅಥವಾ ಡೆಸ್ಕ್‌ಟಾಪ್‌ ಬ್ರೌಸರ್‌ಗಳನ್ನು ಬಳಸುವುದು ಒಳಿತು ಎಂಬುದು ನಮ್ಮ ಸಲಹೆ.

ಎಚ್ಚರಿಕೆ: ಹಣ ಅಥವಾ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಕೇಳುವ ವಂಚನೆಯ ಈಮೇಲ್‌ಗಳು ಮತ್ತು ಸಂದೇಶಗಳ ಮೇಲೆ ಎಚ್ಚರವಿರಲಿ. ನಿಮಗೆ ಅಂತಹ ಸಂದೇಶ ಬಂದಲ್ಲಿ, ಅದನ್ನು ಕೂಡಲೇ [email protected] ಗೆ ಈಮೇಲ್‌ ಮಾಡಿ.

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.