ನಾವು ನೇರವಾಗಿ ತಳಸ್ತರದಲ್ಲಿ ಕೆಲಸ ಮಾಡುತ್ತೇವೆ. ಇದರ ಜೊತೆಗೆ, ಪಾಲುದಾರರೊಂದಿಗೆ ಸಹಯೋಗದಲ್ಲಿ ಕೆಲಸ ಮಾಡುತ್ತೇವೆ ಮತ್ತು ಭಾರತದಾದ್ಯಂತ ಲಾಭೋದ್ದೇಶರಹಿತ ಸಂಸ್ಥೆಗಳಿಗೆ ಬೆಂಬಲ ನೀಡುತ್ತೇವೆ
ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ, ಫೌಂಡೇಷನ್ ಪ್ರಾರಂಭದಲ್ಲಿಯೇ ತಳಸ್ತರದಲ್ಲಿ ಕೆಲಸ ಮಾಡಲು ನಿರ್ಧರಿಸಿತು. ಕಾಲಕ್ರಮೇಣ, ನಮ್ಮ ಕೆಲಸವು ದೇಶದಲ್ಲಿರುವ ಅತ್ಯಂತ ದೂರದ ಪ್ರದೇಶಗಳಿಗೆ ಹರಡಿತು. ನೇರವಾಗಿ ತಳಸ್ತರದಲ್ಲಿ ಕೆಲಸ ಮಾಡುವುದರ ಜೊತೆಗೆ, ನಾವು ಪಾಲುದಾರರ ಜೊತೆಗೂ ದೇಶದೆಲ್ಲಡೆ ಕೆಲಸ ಮಾಡುತ್ತೇವೆ. ಅಂತಹ ಸಹಯೋಗಗಳು ನಮ್ಮ ಸಂಪನ್ಮೂಲಗಳ ಸದ್ಬಳಕೆಗೆ ಸಹಾಯ ಮಾಡುವುದಲ್ಲದೆ, ಮಾನವ ಅಭಿವೃದ್ಧಿ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ನಮ್ಮ ಪಾಲುದಾರರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲೂ ನೆರವಾಗುತ್ತವೆ.

ನಾವು ಬಹುವಾರ್ಷಿಕ ಅನುದಾನಗಳನ್ನು ಕೊಡುವ ಮೂಲಕ, ಪಾಲುದಾರರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ (ಸಿ.ಎಸ್.ಒ) ಜೊತೆಗೂ ಕೆಲಸ ಮಾಡುತ್ತೇವೆ. ಈಗ ನಾವು ಲಿಂಗತ್ವ ನ್ಯಾಯ, ಸಾಂವಿಧಾನಿಕ ಮೌಲ್ಯಗಳು, ವೈಕಲ್ಯತೆ ಮತ್ತು ಆಡಳಿತ – ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ 1,150ಕ್ಕೂ ಹೆಚ್ಚು ಲಾಭೋದ್ದೇಶರಹಿತ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದೇವೆ.
ದೇಶದ ಸಾಮಾಜಿಕ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಫೌಂಡೇಷನ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿತು. ವಿಷಯ ಜ್ಞಾನವುಳ್ಳ, ಕುಶಲ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ವೃತ್ತಿಪರರು ಸಾಮಾಜಿಕ ಕ್ಷೇತ್ರಕ್ಕೆ ಬರುವುದನ್ನು ನಾವು ಈ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.

ನೇರವಾಗಿ
ತಳಮಟ್ಟದಲ್ಲಿ
ನಮ್ಮ ಕಾರ್ಯಘಟಕಗಳು ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣೆಯ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು ಸಮನ್ವಯದಿಂದ ಕೆಲಸ ಮಾಡುತ್ತವೆ.
ಅಪ್‌ಸ್ಟ್ರೀಮ್
ಭಾರತದ ಸಾಮಾಜಿಕ ಕ್ಷೇತ್ರವನ್ನು ಬಲಪಡಿಸಬೇಕೆಂಬ ನಮ್ಮ ಕಾಣ್ಕೆಯನ್ನು ನಮ್ಮ ಪಠ್ಯಕ್ರಮ ಹಾಗೂ ಕ್ಯಾಂಪಸ್ ಗಳು ಸಮರ್ಥವಾಗಿ ಪುಷ್ಟೀಕರಿಸುತ್ತವೆ.

ಪಾಲುದಾರರ ಮೂಲಕ
ತಳಸ್ತರದಲ್ಲಿ
ಸಮತೆ ಹಾಗೂ ಮಾನವ ಹಕ್ಕುಗಳ ಕ್ಷೇತ್ರದಲ್ಲಿನ ನಮ್ಮ ಕಾರ್ಯದಲ್ಲಿ ಸಹಯೋಗವು ಬಹಳ ಮುಖ್ಯವಾದದ್ದು. ನಮ್ಮ ಪಾಲುದಾರರು ಭಾರತದ ಅತ್ಯಂತ ದೂರದ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
