ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

ಬೆಂಗಳೂರಿನ ನಿರಾಶ್ರಿತರಿಗೆ ಘನತೆ ಮತ್ತು ಭರವಸೆ
ಫ್ಲೈಓವರ್‌ಗಳು ಮತ್ತು ಬ್ರಿಡ್ಜ್‌ಗಳ ಕೆಳಗೆ ಮಲಗುವ ಜನರು; ಫುಟ್‌ಪಾತ್‌ಗಳ ಮೇಲೆ ಗುಂಪುಗೂಡಿ ಕೂತಿರುವ ಕುಟುಂಬಗಳು; ಟ್ರಾಫಿಕ್ ಸಿಗ್ನಲ್‌ಗಳು, ರೈಲ್ವೆ ಸ್ಟೇಷನ್‌ಗಳು ಮತ್ತು ಬಸ್ ಡಿಪೋಗಳಲ್ಲಿ ಹಣಕ್ಕಾಗಿ ಬೇಡುತ್ತಿರುವ ವಯಸ್ಸಾದವರು ಹಾಗೂ ರೋಗಿಗಳು — ಇವೆಲ್ಲ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿ ದಿನ ಕಾಣುವ ಸಾಮಾನ್ಯ ದೃಶ್ಯಗಳು. ನಗರದ ಇಂತಹ ನಿರಾಶ್ರಿತರು ನಮ್ಮ ಕಣ್ಣ ಮುಂದೆಯೇ ಇರುತ್ತಾರೆ. ಆದರೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಮ್ಮ ನಗರಗಳಲ್ಲಿ ನಾವು ಅವರ ಇರುವಿಕೆಯನ್ನು ಗಮನಿಸುವುದೇ ಇಲ್ಲ. ಅವರ ಜೀವನಗಳು ಅಸಮಾನತೆ, […]
ನಕ್ಷತ್ರಗಳು ಸಂಚಿಕೆ 22 | ರಾಮಣ್ಣ, ಮಾಗಡಿ, ರಾಮನಗರ | ಉಮಾಶಂಕರ್ ಪೆರಿಯೋಡ
ರಾಮಣ್ಣನವರು ಕೇವಲ ಮೂರು ತಿಂಗಳುಗಳಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸುವಂತೆ ಮಾಡಿದರು. ಇದು ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿತು.
ನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್, ಬೀದರ್ | ಉಮಾಶಂಕರ ಪೆರಿಯೋಡಿ
ಸುಧಾ ಜಿ. ಅವರು ಮೂರು ವಿಭಿನ್ನ ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಪ್ರತಿಯೊಂದು ಶಾಲೆಯು ಒಬ್ಬ ಶಿಕ್ಷಕಿಯಾಗಿ ಅವರ ದೃಷ್ಟಿಕೋನವನ್ನು ತನ್ನದೇ ಆದ ಅನನ್ಯ ರೀತಿಗಳಲ್ಲಿ ರೂಪಿಸಲು ಸಹಾಯ ಮಾಡಿದೆ.
ಬಾಡ್ಮೇರ್‌ನ ಅಜೀಂ ಪ್ರೇಮ್‌ಜಿ ಶಾಲೆಯ ಒಂದು ವಿನೂತನ ಪ್ರಯೋಗ
ಯುವ ವಿದ್ಯಾರ್ಥಿಗಳು ಜಾನಪದ ಸಂಗೀತಗಾರರನ್ನು ಭೇಟಿಯಾದಾಗ ಏನಾಗುತ್ತದೆ? ಮ್ಯಾಜಿಕ್.
ನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ
ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಸಹ, ಗವಿಕುಮಾರ್ ಅವರು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಿದ ರೀತಿ, ಜಾತಿ ತಾರತಮ್ಯದ ಅಡೆತಡೆಗಳ ವಿರುದ್ಧ ಹೋರಾಡಿದ ಪರಿ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯನ್ನು ಹೆಚ್ಚು ಆಕರ್ಷಕವಾಗಿ ಹಾಗೂ ಸ್ವಾಗತಾರ್ಹವಾಗಿ ಮಾಡಿದ ಬಗೆಯನ್ನು ಅನ್ವೇಷಿಸಿ.
ಉತ್ತಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವುದು
ಉತ್ತರಾಖಂಡದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸದಸ್ಯರಾಗಿರುವ ಜ಼ಫರ್ ಅವರನ್ನು ಭೇಟಿ ಮಾಡಿ! ಇವರು ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ತರಗತಿಗಳನ್ನು ಅಭಿವೃದ್ಧಿಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ.
Meals, Play, Care: A Day with Sreema at the Creche in Odisha
This short film follows Sreema, a young child whose day unfolds at the Azim Premji Creche — a safe and nurturing space where children eat three nutritious meals, play and learn together, and are cared for with warmth.
Nakshatragalu EP 18 | Sriyamsh, Kamatagi, Hungunda Taluk | Umashankar Periodi
From setting up an excellent library in his school to organising unique programmes like stargazing, demonstration of the election process, and “homework with parents” to involve both parents and community members, listen to Sriyamsh Kolar’s story.
ನಕ್ಷತ್ರಗಳು ಸಂಚಿಕೆ 17 | ಆನಂದ್ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ
ಮಕ್ಕಳನ್ನು ಆಕರ್ಷಿಸಲು ಮತ್ತು ಅವರ ಕಲಿಕೆಯನ್ನು ಉತ್ತಮಗೊಳಿಲು ಆನಂದ್ ಅವರು ಪರಿಚಯಿಸಿದ ಸೃಜನಶೀಲ ಬೋಧನಾ ವಿಧಾನಗಳನ್ನು ತಿಳಿಯಿರಿ. ತರಗತಿಯಲ್ಲಿ ಕರಡಿ ನೃತ್ಯ ಮಾಡುವವರಂತೆ ವೇಷ ಹಾಕಿದ, ತಮ್ಮ ವಿದ್ಯಾರ್ಥಿಗಳ ಜೊತೆಗಿನ ಸಂವಹನವನ್ನು ಸುಗಮಗೊಳಿಸಲು ಅವರ ಭಾಷಯನ್ನೇ ಕಲಿತ ಆನಂದ್ ಅವರ ಇಪ್ಪತ್ತು ವರ್ಷಗಳ ಪಯಣ ಸ್ಫೂರ್ತಿದಾಯಕವಾದದ್ದೇ.
ನಕ್ಷತ್ರಗಳು ಸಂಚಿಕೆ 16 | ರಾಜೇಶ್ವರಿ ಕಲ್ಮಣಿ, ಬೀದರ್ | ಉಮಾಶಂಕರ್ ಪೆರಿಯೋಡಿ
ಒಂದು ದಯನೀಯ ಸ್ಥಿತಿಯಲ್ಲಿಇದ್ದ ಶಾಲೆಯನ್ನು, ತಮ್ಮ ಕುಟುಂಬದ ನೆರವಿನೊಂದಿಗೆ, ಸಮುದಾಯವು ಹೆಮ್ಮೆ ಪಡುವಂತಹ ಶಾಲೆಯನ್ನಾಗಿಪರಿವರ್ತಿಸಿದ ರಾಜೇಶ್ವರಿ ಅವರೊಂದಿಗೆ ಸಂಭಾಷಣೆ.
ನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ
ಮಂಜುನಾಥ್ ಅವರು, ಸಮರ್ಥ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಒಂದು ಸಾಧಾರಣ ಶಾಲೆಯನ್ನು ಬಹಳ ಕಡಿಮೆ ಅವಧಿಯಲ್ಲಿಯೇ ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಯಾಗಿ ಹೇಗೆ ಪರಿವರ್ತಿಸಿದರು ಎಂದು ಕೇಳಿ.











