ಛತ್ತೀಸ್ಗಢದಲ್ಲಿ ನಮ್ಮ ಕೆಲಸವು 2007ರಲ್ಲಿ ಪ್ರಾರಂಭವಾಯಿತು.
ಪ್ರಸ್ತುತ ನಾವು ಬಲೋಡಾ ಬಜಾರ್, ಬಲರಾಮ್ಪುರ, ಬೆಮೆತರಾ, ಧಮ್ತರಿ, ಜಾಂಜ್ಗೀರ್-ಚಂಪಾ, ಜಶ್ಪುರ, ರಾಯಗಢ, ರಾಯ್ಪುರ ಮತ್ತು ಸುರ್ಗುಜಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸದ ವ್ಯಾಪ್ತಿಯು ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ಇತರ ಕ್ಷೇತ್ರಗಳನ್ನು ಒಳಗೊಂಡಿದೆ.


ಶಿಕ್ಷಣ
ನಾವು ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಕಾರ್ಯಾಗಾರಗಳು, ಬಾಲ ಶೋಧ ಮೇಳ, ಸ್ವಯಂಪ್ರೇರಿತ ಶಿಕ್ಷಕರ ವೇದಿಕೆ (Voluntary Teachers Forum) ಹಾಗೂ ಬೃಹತ್ ಮಟ್ಟದ ಬೇಸಿಗೆ ಮತ್ತು ಚಳಿಗಾಲದ ಶಿಬಿರಗಳು ಇತ್ಯಾದಿಗಳ ಮೂಲಕ ಶಿಕ್ಷಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇವೆ. ಛತ್ತೀಸ್ಗಢದ ಧಮ್ತರಿ ಮತ್ತು ರಾಯಗಢದಲ್ಲಿ ಅಜೀಂ ಪ್ರೇಮ್ಜಿ ಶಾಲೆಗಳಿವೆ.

44
ಶಿಕ್ಷಕ ಕಲಿಕಾ ಕೇಂದ್ರಗಳು
14,135
ಅಂಗನವಾಡಿ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
36,046
ಶಾಲಾ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
6 ಲಕ್ಷಕ್ಕೂ
ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ತಲುಪಿದ್ದೇವೆ
ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್
ಅವಕಾಶವಂಚಿತ ಹಿನ್ನೆಲೆಯಿಂದ ಬಂದ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಬೆಂಬಲ ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆಯನ್ನು 2024ರಲ್ಲಿ ಪ್ರಾರಂಭಿಸಲಾಯಿತು. ಈ ಉಪಕ್ರಮವು ಈಗ ಛತ್ತೀಸ್ಗಢದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ.
ಆರೋಗ್ಯ
ನಾವು ನಮ್ಮ ಕೆಲಸವನ್ನು ಅಕ್ಟೋಬರ್ 2022ರಲ್ಲಿ ರಾಯಗಢ ಜಿಲ್ಲೆಯ ಧರಮ್ಜೈಗಢ್ ಬ್ಲಾಕ್ನಲ್ಲಿ ಪ್ರಾರಂಭಿಸಿದೆವು. ಪ್ರಸ್ತುತ ನಾವು ನಾಲ್ಕು ಬ್ಲಾಕ್ಗಳಲ್ಲಿ ಕೆಲಸ ಮಾಡುತ್ತಿದ್ದೇವೆ (ರಾಯಗಢದ ಧರಮ್ಜೈಗಢ್ ಮತ್ತು ಲೈಲುಂಗಾ, ಜಶ್ಪುರದ ಪತ್ತಲ್ಗಾಂವ್ ಮತ್ತು ಸುರ್ಗುಜಾದ ಸೀತಾಪುರ). ಈ ಪ್ರದೇಶದ ಅತ್ಯಂತ ದುರ್ಬಲ ವರ್ಗದ ಕುಟುಂಬಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ನಾವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಗತ್ಯ ಆರೋಗ್ಯ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದರ ಮೇಲೆ ಗಮನ ಹರಿಸುತ್ತಿದ್ದೇವೆ.
14
ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಹಯೋಗ
109
ಉಪ ಆರೋಗ್ಯ ಕೇಂದ್ರಗಳೊಂದಿಗೆ ಸಹಯೋಗ
3,76,510
ಜನರಿಗೆ ಆರೋಗ್ಯ ಸೇವೆ

ಬಾಲವಾಡಿಗಳು
ಬಾಲವಾಡಿಗಳ ಮೂಲಕ, ನಾವು ಏಳು ತಿಂಗಳಿಂದ ಮೂರು ವರ್ಷ ವಯಸ್ಸಿನೊಳಗಿನ ದುರ್ಬಲ ವರ್ಗದ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ಶ್ರಮಿಸುತ್ತಿದ್ದೇವೆ. ನಾವು ಛತ್ತೀಸ್ಗಢದ 6 ಜಿಲ್ಲೆಗಳಲ್ಲಿ (ಬಲರಾಮ್ಪುರ, ಧಮ್ತರಿ, ರಾಯಗಢ, ರಾಯ್ಪುರ ಮತ್ತು ಸುರ್ಗುಜಾ) 390 ಬಾಲವಾಡಿಗಳನ್ನು ನಡೆಸುತ್ತಿದ್ದೇವೆ.
390
ಬಾಲವಾಡಿಗಳಲ್ಲಿ ಕಾರ್ಯಾಚರಣೆಯಲ್ಲಿ
5,500
ದಾಖಲಾಗಿರುವ ಮಕ್ಕಳು
ಜೀವನೋಪಾಯಗಳು
ರಾಜ್ಯದ ಬಡ ಮತ್ತು ಅತ್ಯಂತ ದುರ್ಬಲ ಸಮುದಾಯಗಳು ಎದುರಿಸುತ್ತಿರುವ ಅಪಾಯಗಳನ್ನು ಹೆಚ್ಚಿಸದೆಯೇ, ಅವರ ಕುಟುಂಬದ ಆದಾಯದಲ್ಲಿ ಗಮನಾರ್ಹ ಮತ್ತು ಸುಸ್ಥಿರ ಸುಧಾರಣೆಯನ್ನು ತರುವುದು ನಮ್ಮ ಉದ್ದೇಶ. ನಾವು ನಮ್ಮ ಕಾರ್ಯವನ್ನು 2022ರಲ್ಲಿ ರಾಯಗಢ ಜಿಲ್ಲೆಯ ಧರಮ್ಜೈಗಢ್ ಬ್ಲಾಕ್ನ ಆಯ್ದ ಕ್ಲಸ್ಟರ್ಗಳಲ್ಲಿ ಪ್ರಾರಂಭಿಸಿದೆವು.
42
ಹಳ್ಳಿಗಳು
11,400
ಕುಟುಂಬಗಳು
38,000+
ಜನರು

ಇತರ ಕ್ಷೇತ್ರಗಳು
ಅನುದಾನಗಳು
ನಾವು ಛತ್ತೀಸ್ಗಢದಲ್ಲಿ 34 ಸಹವರ್ತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಸಂಸ್ಥೆಗಳು ಸಂವಿಧಾನಿಕ ಮೌಲ್ಯಗಳು, ಆಡಳಿತ, ಭೂಮಿ ಮತ್ತು ಅರಣ್ಯದಂತಹ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ.
ನಮ್ಮೊಂದಿಗೆ ಕೆಲಸ ಮಾಡಿ
ನಮ್ಮ ಹೊಸ ಉದ್ಯೋಗಾವಕಾಶಗಳ ಪಟ್ಟಿಯಿಂದ ನಿಮ್ಮ ಕೌಶಲ ಮತ್ತು ಉದ್ದೇಶಕ್ಕೆ ಸರಿಹೊಂದುವ ಸೂಕ್ತವಾದ ಕೆಲಸವನ್ನು ಕಂಡುಕೊಳ್ಳಿ.
ಅಂಕಿಅಂಶಗಳನ್ನು ಏಪ್ರಿಲ್ 2025ರಲ್ಲಿ ಪಡೆಯಲಾಗಿದೆ. ಇವುಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುವುದು.
