ನಮ್ಮ ಇತಿಹಾಸ
ನಮ್ಮ ಸಂಸ್ಥೆಯನ್ನು ಔಪಚಾರಿಕವಾಗಿ ಮಾರ್ಚ್ 9ನೇ ತಾರೀಕು 2001 ರಲ್ಲಿ (1956 ರ ಇಂಡಿಯನ್ ಕಂಪನಿ ಆ್ಯಕ್ಟ್ ನ 25ನೇ ಕಲಮಿನ ಅಡಿಯಲ್ಲಿ) ಸ್ಥಾಪಿಸಲಾಯಿತು. ಅಂದಿನಿಂದ ಜನವರಿ 2023 ರವರೆಗೂ ಶ್ರೀಯುತ ಅಜೀಂ ಪ್ರೇಮ್‌ಜಿ ತಮ್ಮ ಸಂಪತ್ತಿನ ಒಂದು ಗಣನೀಯವಾದ ಭಾಗವನ್ನು, ಅಂದರೆ ಸುಮಾರು 2,40,000 ಕೋಟಿ ರೂಪಾಯಿ (29 ಬಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ಹಣವನ್ನು ಲೋಕೋಪಕಾರಿ ದತ್ತಿನಿಧಿಯನ್ನು ಸೃಷ್ಟಿಸಲು ಕೊಡುಗೆ ನೀಡಿದ್ದಾರೆ. ಈ ದತ್ತಿನಿಧಿಯು, ಸಂಸ್ಥೆಯ ಹಲವಾರು ಉಪಕ್ರಮ(ಮುಂದೊಡಗು)ಗಳಿಗೆ ನೆರವು ನೀಡುವ ಆರ್ಥಿಕ ಮೂಲಧನವಾಗಿ ಕೆಲಸ ಮಾಡುತ್ತಿದೆ.
ಅಜೀಂ ಪ್ರೇಮ್‌ಜಿ ಹಾಗೂ ನಮ್ಮ ಸಂಸ್ಥೆಯ ಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ(ಸಿಇಒ) ದಿಲೀಪ್ ರಂಜೇಕರ್ ಅವರ ಮಧ್ಯದ ಸುಧೀರ್ಘವಾದ ಚರ್ಚೆಗಳು ನಮ್ಮ ಸಂಸ್ಥೆಯ ಹುಟ್ಟಿಗೆ ಕಾರಣವಾದದ್ದನ್ನು ಗುರುತಿಸಬಹುದು. ಈ ಮಾತುಕತೆಗಳು ಒಂದು ಶ್ವೇತಪತ್ರವನ್ನು ತಯಾರು ಮಾಡುವಲ್ಲಿ ಕೊನೆಗೊಂಡಿದ್ದು, ಅದು ಸಂಸ್ಥೆಯ ಗುರಿಯನ್ನು ರೂಪಿಸಲು ತಳಹದಿಯನ್ನು ಹಾಕಿತು. ಅಭಿವೃದ್ಧಿಗೆ ಸಂಬಂಧಿಸಿದಂತಹ ಹಲವಾರು ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ, ಪ್ರಾಥಮಿಕ ಶಿಕ್ಷಣವು ಸಂಸ್ಥೆಯ ಪ್ರಯತ್ನಗಳ ಕೇಂದ್ರ ವಿಷಯವಾಗಿ ಹೊರಹೊಮ್ಮಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ತೊಡೆದು ಹಾಕುವಲ್ಲಿ, ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಶಿಕ್ಷಣವು ಒಂದು ಪ್ರಮುಖವಾದ ಸವಾಲು ಎಂಬುದನ್ನು ನಾವು ಗುರುತಿಸುತ್ತೇವೆ. ಅಲ್ಲದೆ ಶಿಕ್ಷಣ ಕ್ಷೇತ್ರವು ನಮ್ಮ ಪ್ರಯಾಣದ ಹಾದಿಯಾಗಿ ಮುಂದುವರೆದಿದೆ.

ಪ್ರಾರಂಭದಿಂದಲೂ ಸಹ ನಾವು ನಮ್ಮ ಉದ್ದೇಶವನ್ನು ತಲುಪಲು ಸರ್ಕಾರದ ಉಪಕ್ರಮಗಳೊಂದಿಗೆ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಪರಿಣಾಮಕಾರಿಯಾದ, ಹಾಗೂ ವ್ಯಾಪಕ ನೆಲೆಯಲ್ಲಿ ಅನುಷ್ಠಾನಗೊಳಿಸಬಹುದಾದ ಹಾಗೂ ಪುನರಾವರ್ತಿಸಬಹುದಾದ ಬದಲಾವಣೆಯ ಮಾದರಿಗಳನ್ನು ಪರಿಚಯಿಸುವ ಮೂಲಕ ನಾವು ಇಂದಿನವರೆಗೂ ಸರ್ಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದೇವೆ ಹಾಗೂ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದ್ದೇವೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಕರಿಗಾಗಿ ಉತ್ತಮ ಗುಣಮಟ್ಟದ ಶಿಕ್ಷಕರ ಶಿಕ್ಷಣಕ್ಕೂ ಸಹ ನಾವು ಬೆಲೆ ಕೊಡುತ್ತೇವೆ. ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯ ಒಳಗಡೆಯೇ ಹಲವಾರು ಕಾರ್ಯಕ್ರಮಗಳು ಹಾಗೂ ಮಧ್ಯಪ್ರವೇಶಗಳ ಮೂಲಕ, ನಾವು ಶಿಕ್ಷಕರು ಹಾಗೂ ಬೋಧನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ, ಅವರು ತಮ್ಮ ಜ್ಞಾನ ಹಾಗೂ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಾಗೂ ವಿಸ್ತರಿಸಿಕೊಳ್ಳುವ ಪ್ರಯತ್ನಕ್ಕೆ ನಮ್ಮ ಬೆಂಬಲವನ್ನು ಮುಂದುವರೆಸುತ್ತಿದ್ದೇವೆ.
ಕಾಲಾನುಕ್ರಮ ಬೆಳವಣಿಗೆಗಳು
ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು 2023ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಹಾಗೂ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ.
ಹೆಚ್ಚಿನ ಓದಿಗಾಗಿಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣಾ ಕ್ಷೇತ್ರಗಳಿಗೆ ವಿಸ್ತರಣೆ
ಭೋಪಾಲ್‌ನಲ್ಲಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಕಾರ್ಯಕ್ರಮವನ್ನು (ಎಮ್ ಪಿ ಎಚ್) ಆರಂಭಿಸಿರುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸವನ್ನು ಪ್ರಾರಂಭಿಸಿದ್ದೇವೆ. ದುರ್ಬಲ ಸಮುದಾಯಗಳಿಗೆ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲು ಆಸ್ಪತ್ರೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಜೊತೆಗೆ ಕೆಲಸ ಮಾಡಲು ನಾವು ಬಯಸುತ್ತೇವೆ.ಅನುದಾನಗಳು
ಚಿತ್ರ ಕೃಪೆ – ಪುರುಷೋತ್ತಮ್ ಠಾಕೂರ್ಅಜೀಂ ಪ್ರೇಮ್‌ಜಿ ಶಾಲೆಗಳು
ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
ಕ್ಷೇತ್ರ ಸಂಸ್ಥೆಗಳು
ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತ ನಮ್ಮ ಕ್ಷೇತ್ರ ಕಾರ್ಯವು ಗಮನಹರಿಸುತ್ತದೆ. ಈ ಪ್ರಯತ್ನದಲ್ಲಿ ದೇಶದ ಹೆಚ್ಚು ಅವಕಾಶವಂಚಿತ ಪ್ರದೇಶಗಳಿಗೆ ಒತ್ತನ್ನು ನೀಡಲಾಗುತ್ತದೆ.ಹೆಚ್ಚಿನ ಓದಿಗಾಗಿಶಾಲಾ ಶಿಕ್ಷಣದಲ್ಲಿ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶ

ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ನೋಂದಣಿ ಹಾಗೂ ಶಾಲೆಗಳಲ್ಲಿ ಮಕ್ಕಳು ಉಳಿದುಕೊಳ್ಳುವುದನ್ನು ವಿಸ್ತರಿಸುವುದು ಹಾಗೂ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶಗಳನ್ನು ಮಾಡುತ್ತಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಂಸ್ಥೆಯು ತೊಡಗಿಕೊಂಡಿತು. ಹೆಚ್ಚಿನ ಓದಿಗಾಗಿ
Launch of Azim Premji Scholarship
Partnership with CMC Vellore (Health)

Christian Medical College Vellore, in partnership with Azim Premji Foundation, will set up a new medical college and a teaching hospital on its Chittoor campus to offer value-based healthcare and medical education, primarily for the disadvantaged.
Know more
ಭಾರತದಲ್ಲಿ ಕೋವಿಡ್ -19ರ ಸ್ಫೋಟದಿಂದಾಗಿ ಉಂಟಾದ ಆರೋಗ್ಯ ಹಾಗೂ ಮಾನವತೆಯ ತೀವ್ರವಾದ ಬಿಕ್ಕಟ್ಟಿನ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಪಿಡುಗಿನ ಪರಿಣಾಮಗಳನ್ನು ಎದುರಿಸಲು ನಾಗರಿಕ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಯಪ್ರವೃತ್ತರಾದೆವು.