ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್

scholarship-featured-image

ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ಒಂದು ಉಪಕ್ರಮ

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌, ಭಾರತದ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಸಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಹೊಂದಿರುವ ಬದ್ಧತೆಯ ಒಂದು ಅಂಗವಾಗಿದೆ. ಈ ಉಪಕ್ರಮವು ಅವಕಾಶವಂಚಿತ ಹಿನ್ನೆಲೆಗಳುಳ್ಳ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಮೊತ್ತದ ಸ್ಕಾಲರ್‌ಶಿಪ್ ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ಅವರ ಮೊದಲ ಪದವಿ ಅಥವಾ ಡಿಪ್ಲೊಮ ಕಾರ್ಯಕ್ರಮದ ಪೂರ್ಣ ಅವಧಿಗೆ ನೀಡಲಾಗುವುದು.

2026 ನೇ ಸಾಲಿನ ವಿದ್ಯಾರ್ಥಿವೇತನದ (Scholarship) ಅರ್ಜಿಗಳು ಆಗಸ್ಟ್ 2026ರಲ್ಲಿ ಪ್ರಾರಂಭವಾಗುತ್ತವೆ. ಅರ್ಹತಾ ಮಾನದಂಡಗಳು, ಅರ್ಹ ಪ್ರದೇಶಗಳು, ಅಗತ್ಯ ದಾಖಲೆಗಳು, ಮತ್ತು ಅರ್ಜಿ ಸಲ್ಲಿಸುವ ದಿನಾಂಕಗಳನ್ನು ತಿಳಿದುಕೊಳ್ಳಲು ಕೆಳಗಿನ ಮಾಹಿತಿಯನ್ನು ಪರಿಶೀಲಿಸಿ.

ಸೆಪ್ಟೆಂಬರ್ 2025 (ಮೊದಲನೇ ಸುತ್ತು) ಮತ್ತು ಜನವರಿ 2026 (ಎರಡನೇ ಸುತ್ತು) ರಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿದ್ಯಾರ್ಥಿವೇತನ ದೃಢೀಕರಣ ಮತ್ತು ವಿತರಣೆಯ ಪ್ರಕ್ರಿಯೆ ಪ್ರಾರಂಭವಾಗಿದೆೆ. ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ.

2026ರ ಸಾಲಿನ ವಿದ್ಯಾರ್ಥಿವೇತದ ಮೊದಲ ಸುತ್ತಿನ ಅರ್ಜಿಗಳು 2026ರ ಆಗಸ್ಟ್ 10 ರಿಂದ 31ರವರೆಗೆ ಸ್ವೀಕರಿಸಲಾಗುತ್ತವೆ.

2026ರ ಸಾಲಿನ ಅರ್ಹ ಪ್ರದೇಶಗಳ ಪಟ್ಟಿಗೆ ಆಂಧ್ರ ಪ್ರದೇಶ ಮತ್ತು ಡೆಲ್ಲಿ (NCT) ಯನ್ನು ಸೇರಿಸಲಾಗಿದೆ! ಅರ್ಜಿ ಸಲ್ಲಿಸುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

2024 ಮತ್ತು 2025ರ ಸಾಲಿನ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ, 2026–27 ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನದ ನವೀಕರಣದ (Renewal) ಅರ್ಜಿಗಳು ಸೆಪ್ಟೆಂಬರ್ 2026 ರಲ್ಲಿ ಪ್ರಾರಂಭವಾಗುತ್ತವೆ.

ಈಗ ನೀವು ನಿಮ್ಮ ಮೊಬೈಲ್ ನಿಂದಲೇ ನಮ್ಮನ್ನು ಸಂಪರ್ಕಿಸಬಹುದು! ಸಹಾಯಕ್ಕಾಗಿ WhatsApp: 9019960536  (ಸೋಮವಾರದಿಂದ ಶುಕ್ರವಾರ, ಬೆಳಿಗ್ಗೆ 9:00 ರಿಂದ ಸಂಜೆ 5:00ರವರೆಗೆ) ಸಂಪರ್ಕಿಸಿ.

ನಮ್ಮನ್ನು ಸಂಪರ್ಕಿಸಿ

ಅರ್ಹತೆ

ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು:

  • 10 ಮತ್ತು 12ನೇ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರಬೇಕು.
  • ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು*

ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಮತ್ತು ಉತ್ತರಾಖಂಡ

ಸ್ಕಾಲರ್‌ಶಿಪ್‌ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು

timeline and process for scholarship

ಅರ್ಜಿ ಸಲ್ಲಿಸುವುದು ಹೇಗೆ?

ಸಲ್ಲಿಸಬೇಕಾದ ದಾಖಲೆಗಳು

ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಲು, ಈ ಕೆಳಗಿನ ದಾಖಲೆಗಳನ್ನು ನಮ್ಮ ವೆಬ್‌ಸೈಟ್‌ ಮೂಲಕ ಸಲ್ಲಿಸಿ. ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ

1. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವೇನು?

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವು ಅವಕಾಶವಂಚಿತ ಹಿನ್ನೆಲೆಗಳುಳ್ಳ ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುವುದಾಗಿದೆ. ಈ ಉಪಕ್ರಮವು ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಒಟ್ಟಾರೆ ಬದ್ಧತೆಯ ಭಾಗವಾಗಿದೆ.

ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು:

  • 10 ಮತ್ತು 12 – ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರಬೇಕು.
  • ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.

ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮನ್ನು ಸ್ಕಾಲರ್‌ಷಿಪ್‌ಗೆ ಪರಿಗಣಿಸಲಾಗುವುದಿಲ್ಲ:

  • ನೀವು 2025-26 ಶೈಕ್ಷಣಿಕ ವರ್ಷಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮದಲ್ಲಿ ಪ್ರವೇಶ ಪಡೆದಿದ್ದೀರ.
  • ನೀವು ವಿಪ್ರೋದ ಸ್ಕಾಲರ್‌ಶಿಪ್‌ಗಳನ್ನು (ಉದಾ. ಸಂತೂರ್ ಸ್ಕಾಲರ್‌ಶಿಪ್) ಪಡೆಯುತ್ತಿದ್ದೀರ.

10 ಮತ್ತು 12 – ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರುವ ಎಲ್ಲ ವಿದ್ಯಾರ್ಥಿನಿಯರೂ ಅರ್ಹರು.

(1) ಅರುಣಾಚಲ ಪ್ರದೇಶ, (2) ಅಸ್ಸಾಂ, (3) ಬಿಹಾರ, (4) ಛತ್ತೀಸ್‌ಗಢ, (5) ಜಾರ್ಖಂಡ್, (6) ಕರ್ನಾಟಕ, (7) ಮಧ್ಯಪ್ರದೇಶ, (8) ಮಣಿಪುರ, (9) ಮೇಘಾಲಯ, (10) ಮಿಜೋರಾಂ, (11) ನಾಗಾಲ್ಯಾಂಡ್, (12) ಒಡಿಶಾ, (13) ರಾಜಸ್ಥಾನ, (14) ಸಿಕ್ಕಿಂ, (15) ತೆಲಂಗಾಣ, (16) ತ್ರಿಪುರ, (17) ಉತ್ತರ ಪ್ರದೇಶ, (18) ಉತ್ತರಾಖಂಡ ಮತ್ತು (19) ಪುದುಚೇರಿ.

ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ನೀವು ಶೈಕ್ಷಣಿಕ ವರ್ಷ 2025–26ರಲ್ಲಿ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಮೊದಲ ವರ್ಷಕ್ಕೆ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಸರ್ಕಾರಿ ಅಥವಾ ಖಾಸಗಿ ಆಗಿರಬಹುದು, ಆದರೆ ಅದು ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯ ಆಗಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಭಾರತದಲ್ಲಿ ಎಲ್ಲಿ ಬೇಕಾದರೂ ಇರಬಹುದು. ನೀವು ಪ್ರವೇಶ ಪಡೆದಿರುವ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಅವಧಿಯು 2-5 ವರ್ಷಗಳಾಗಿರಬೇಕು. ಇದು ನಿಮ್ಮ ಮೊದಲ ಪದವಿ ಅಥವಾ ಡಿಪ್ಲೊಮಾ ಆಗಿರಬೇಕು.

ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ಭಾರತದ ಯಾವುದೇ ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.

ಇಲ್ಲ, ಸ್ಕಾಲರ್‌ಶಿಪ್ ಅನ್ನು ಮೆರಿಟ್‌ ಆಧಾರದ ಮೇಲೆ ನೀಡುವುದಿಲ್ಲ; ಆದಾಗ್ಯೂ, ಪ್ರಶ್ನೆ 2 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.

ಇಲ್ಲ, ವಯಸ್ಸಿನ ಮಿತಿಯಿಲ್ಲ; ಆದಾಗ್ಯೂ, ಪ್ರಶ್ನೆ 3 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.

FAQ ವಿಭಾಗವನ್ನು ಇಂಗ್ಲಿಷ್‌, ಹಿಂದಿ, ಕನ್ನಡ, ಒಡಿಯ, ಅಸ್ಸಾಮೀಸ್‌, ಅಥವಾ ತೆಲುಗುನಲ್ಲಿ ಓದಲು, ಕೆಳಗಿನ ಫೈಲ್‌ಗಳನ್ನು ನೋಡಿ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು – ಇನ್ನಷ್ಟು ಓದಿ ಹಿಂದಿ | ಕನ್ನಡ | ಒಡಿಯ | ಅಸ್ಸಾಮೀಸ್‌ತೆಲುಗು  ಭಾಷೆಗಳಲ್ಲಿ

ಸಲ್ಲಿಸಬೇಕಾದ ದಾಖಲೆಗಳಿಗೆ ಮಾರ್ಗಸೂಚಿಗಳು – ಇನ್ನಷ್ಟು ಓದಿ ಇಂಗ್ಲಿಷ್‌ | ಹಿಂದಿ | ಕನ್ನಡ | ಒಡಿಯ | ಅಸ್ಸಾಮೀಸ್‌ತೆಲುಗು  ಭಾಷೆಗಳಲ್ಲಿ

ನಿಮ್ಮ ಪ್ರಶ್ನೆಯನ್ನು ನಮಗೆ ಕಳಿಸಿ





    © 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
    © 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.