ಕ್ಷೇತ್ರ ಅಧ್ಯಯನಗಳು

Fieldstudies

ನಮ್ಮ ಕ್ಷೇತ್ರ ಸಂಶೋಧನೆಯು ಶಾಲಾ ಶಿಕ್ಷಣದಲ್ಲಿನ ಪ್ರಮುಖ ವಿಚಾರಗಳ ಕುರಿತು ನಾವು ನಡೆಸುವ ಕೆಲಸದ ಬಗ್ಗೆ ಮಾಹಿತಿ ನೀಡುತ್ತದೆ

ಅರಂಭದಲ್ಲಿ, 2001ರಲ್ಲಿ ಶಾಲಾ ಶಿಕ್ಷಣದಲ್ಲಿನ ನಮ್ಮ ಕೆಲಸವು ಕ್ರಮಬದ್ಧವಾದ ರೀತಿಯಲ್ಲಿ ಪ್ರಾರಂಭಗೊಂಡಿತು. ನಾವು ಸರ್ಕಾರಿ ಶಾಲೆಗಳೊಂದಿಗೆ ʻಕಲಿಕಾ ಖಾತರಿʼ, ʻಮಗು ಸ್ನೇಹಿ ಶಾಲೆಗಳ ಉಪಕ್ರಮʼ ಮತ್ತು ʻವೇಗವರ್ಧಿತ ಕಲಿಕೆʼ ಮುಂತಾದ ಕಾರ್ಯಕ್ರಮಗಳಿಗಾಗಿ ಕೆಲಸ ಮಾಡಿದೆವು. ಇಂದು ನಾವು ಕ್ಷೇತ್ರ ಮಟ್ಟದಲ್ಲಿ ಜಿಲ್ಲಾ ಸಂಸ್ಥೆಗಳು (ಡಿ.ಐ ಗಳು) ಮತ್ತು ಶಿಕ್ಷಕ ಕಲಿಕಾ ಕೇಂದ್ರಗಳಲ್ಲಿ (ಟಿ.ಎಲ್‌.ಸಿ ಗಳು) ಹೆಚ್ಚು ಸಾಂಸ್ಥಿಕ ವಿಧಾನದಲ್ಲಿ ಕೆಲಸ ಮಾಡುತ್ತಿದ್ದೇವೆ.

ತಳ ಮಟ್ಟದಲ್ಲಿ ನಮ್ಮ ತಂಡಗಳು, ತರಗತಿಯೊಳಗಿನ ಬೋಧನೆ ಮತ್ತು ಕಲಿಕೆಯ ಮೇಲೆ ನೇರ ಪ್ರಭಾವವನ್ನು ಹೊಂದಿರುವ ಶಿಕ್ಷಕರು, ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಇತರ ಭಾಗೀದಾರೊಂದಿಗೆ ನಿಕಟವಾಗಿ ಮತ್ತು ನಿರಂತರವಾಗಿ ಕೆಲಸ ಮಾಡುತ್ತವೆ.

FieldStudies

ನಾವು ಯಾವ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆಯೋ ಆ ಜಿಲ್ಲೆಗಳ ಪ್ರಾಥಮಿಕ ದತ್ತಾಂಶವನ್ನು ಬಳಸಿ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಕಳವಳಕಾರಿ ಕ್ಷೇತ್ರಗಳು ಮತ್ತು ವಿಚಾರಗಳಲ್ಲಿ ಕ್ಷೇತ್ರ ಸಂಶೋಧನಾ ಅಧ್ಯಯನಗಳನ್ನು ನಡೆಸುತ್ತೇವೆ. ನೀತಿಯ ಮೇಲೆ ಪ್ರಭಾವ ಬೀರಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರು ಮತ್ತು ಪಂಡಿತರೊಂದಿಗೆ ನಮ್ಮ ಒಳನೋಟ ಮತ್ತು ಅಧ್ಯಯನಗಳನ್ನು ಹಂಚಿಕೊಳ್ಳಲು ಯತ್ನಿಸುತ್ತೇವೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.