ಕರ್ನಾಟಕದಲ್ಲಿ ನಮ್ಮ ಕೆಲಸ 2001ರಲ್ಲಿ ಪ್ರಾರಂಭವಾಯಿತು

ಪ್ರಸ್ತುತ ನಾವು ಕಲಬುರಗಿ, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ಬಾಗಲಕೋಟೆ, ಬೀದರ್, ಬೆಂಗಳೂರು, ಮಂಡ್ಯ, ಯಾದಗಿರಿ, ರಾಯಚೂರು, ರಾಮನಗರ, ವಿಜಯನಗರ, ವಿಜಯಪುರ ಜಿಲ್ಲೆಗಳಲ್ಲಿ ಕೆಲಸಮಾಡುತ್ತಿದ್ದೇವೆ. ನಮ್ಮ ಕೆಲಸವು ಶಿಕ್ಷಣ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.

ಶಿಕ್ಷಣ

ನಮ್ಮ ಕೆಲಸವು ಆರಂಭಿಕ ಬಾಲ್ಯ ಶಿಕ್ಷಣದಿಂದ (ECE) ಉನ್ನತ ಶಿಕ್ಷಣದವರೆಗೆ ವ್ಯಾಪಿಸಿದೆ. ನಾವು ಶಿಕ್ಷಕರು, ಶಾಲಾ ಮುಖ್ಯಸ್ಥರು, ಅಧಿಕಾರಿಗಳು, ಕಾಲೇಜು ಅಧ್ಯಾಪಕರು ಮತ್ತು ರಾಜ್ಯ ಮಟ್ಟದ ಸಂಸ್ಥೆಗಳಾದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (SCERT) ಮತ್ತು ಸಮಗ್ರ ಶಿಕ್ಷಣ ಅಭಿಯಾನದೊಂದಿಗೆ ತೊಡಗಿಸಿಕೊಂಡಿದ್ದೇವೆ. ಬೆಂಗಳೂರು, ಕಲಬುರಗಿ ಮತ್ತು ಯಾದಗಿರಿಯಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳಿವೆ.

89

ಶಿಕ್ಷಕ ಕಲಿಕಾ ಕೇಂದ್ರಗಳು

25,700 +

ನೇರವಾಗಿ ತೊಡಗಿಸಿಕೊಂಡಿರುವ ಅಂಗನವಾಡಿ ಶಿಕ್ಷಕರು

56,500 +

ನೇರವಾಗಿ ತೊಡಗಿಸಿಕೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರು

15,71,000 +

ಸರ್ಕಾರಿ ಶಾಲಾ ಮಕ್ಕಳು

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2010ರಲ್ಲಿ ಸ್ಥಾಪನೆಯಾಯಿತು. ಇದರ ಮೊದಲ ಕ್ಯಾಂಪಸ್ ಬೆಂಗಳೂರಿನಲ್ಲಿದೆ. ನಾವು ವಿವಿಧ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರರಿಗಾಗಿ ಶಿಕ್ಷಣ ಮುಂದುವರಿಕೆಯ ಕಾರ್ಯಕ್ರಮಗಳನ್ನು ನೀಡುತ್ತೇವೆ.

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್

ಅವಕಾಶವಂಚಿತ ಹಿನ್ನೆಲೆಯುಳ್ಳ ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವಾಗುವ ಉದ್ದೇಶದಿಂದ ಈ ಅನುಕ್ರಮವನ್ನು 2024ರಲ್ಲಿ ಪ್ರಾರಂಭಿಸಲಾಯಿತು. ಈ ವಿದ್ಯಾರ್ಥಿವೇತನವು ಈಗ ಕರ್ನಾಟಕದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಲಭ್ಯವಿದೆ. 2025-26ರಲ್ಲಿ ಸುಮಾರು 37,000 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಲಿದ್ದಾರೆ.

ಆರೋಗ್ಯ

ಬೆಂಗಳೂರಿನ 5 ಕ್ಲಸ್ಟರ್‌ಗಳಲ್ಲಿ ನಾವು ನೇರವಾಗಿ ಸಮುದಾಯ ಆರೋಗ್ಯ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲ್ಲಿ ವೈದ್ಯರು, ಪ್ರಯೋಗಾಲಯಗಳು ಮತ್ತು ಔಷಧಾಲಯಗಳನ್ನು ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಫರಲ್ ಸಹಾಯ ಕೇಂದ್ರಗಳೂ ಇವೆ. ಕರ್ನಾಟಕದ ಗ್ರಾಮೀಣ ಆರೋಗ್ಯ ಕಾರ್ಯವು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಪ್ರಾರಂಭವಾಗಿದೆ.

4

ಬೆಂಗಳೂರಿನಲ್ಲಿ 4 ಆರೋಗ್ಯ ಕೇಂದ್ರಗಳು

25,000

ಕುಟುಂಬಗಳು

91,000

ಜನರಿಗೆ ಸೇವೆ

ಬಾಲವಾಡಿಗಳು

ಬಾಲವಾಡಿಗಳು ಏಳು ತಿಂಗಳಿಂದ ಮೂರು ವರ್ಷದೊಳಗಿನ ದುರ್ಬಲ ಕುಟುಂಬಗಳ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಬೆಂಗಳೂರಿನಲ್ಲಿ ನಮ್ಮ ಸಹವರ್ತಿಗಳ ಮೂಲಕ ಆರು ಬಾಲವಾಡಿಗಳನ್ನು ನಡೆಸುತ್ತಿದ್ದು, ಇದರಿಂದ ಸುಮಾರು 175 ಮಕ್ಕಳಿಗೆ ನೆರವಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲೂ ಈ ಕೆಲಸ ಪ್ರಾರಂಭವಾಗಿದೆ.

ಮಧ್ಯಾಹ್ನದ ಬಿಸಿಯೂಟದಲ್ಲಿ ಪೌಷ್ಟಿಕಾಂಶ ವರ್ಧನೆ

ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ನೀಡಲು ನಾವು ಮೂರು ವರ್ಷಗಳಲ್ಲಿ 1,500 ಕೋಟಿ ರೂಪಾಯಿಗಳನ್ನು ನೀಡುವ ಭರವಸೆ ನೀಡಿದ್ದೇವೆ. ಸರ್ಕಾರವು ನೀಡುವ ಎರಡು ದಿನಗಳ ಜೊತೆಗೆ, ನಮ್ಮ ಕಾರ್ಯಕ್ರಮವು ವಾರದ ಉಳಿದ ನಾಲ್ಕು ದಿನಗಳಂದು ಮೊಟ್ಟೆ ನೀಡುತ್ತದೆ.

ಇತರ ಕ್ಷೇತ್ರಗಳು

ಅನುದಾನಗಳು

ನಾವು ಕರ್ನಾಟಕದಲ್ಲಿ 194 ಸಹವರ್ತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ. ಇವರು ವಿಶೇಷವಾಗಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು, ಸಾಂವಿಧಾನಿಕ ಮೌಲ್ಯಗಳು, ದಿವ್ಯಾಂಗತೆ, ಲಿಂಗ ನ್ಯಾಯ, ಆಡಳಿತ, ಆರೋಗ್ಯ, ಭೂಮಿ ಮತ್ತು ಅರಣ್ಯ, ನಾಗರಿಕ ಸಮಾಜವನ್ನು ಬಲಪಡಿಸುವುದು ಮತ್ತು ನಗರ ಉಪಕ್ರಮಗಳಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.

ಕನ್ನಡ ಉಪಕ್ರಮ:

ಕರ್ನಾಟಕಕ್ಕೆ ನಮ್ಮ ಬದ್ಧತೆಯ ಭಾಗವಾಗಿ, ನಾವು ಸ್ಥಳೀಯ ಸಂಸ್ಕೃತಿ, ಇತಿಹಾಸ ಮತ್ತು ಮಕ್ಕಳ ಸಾಹಿತ್ಯವನ್ನು ಸಂಭ್ರಮಿಸುವ ಉಚಿತ ಮತ್ತು ಮುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಅನುವಾದ ಸಂಪದವು ನಮ್ಮ ಶೈಕ್ಷಣಿಕ ಸಂಪನ್ಮೂಲಗಳನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನವಾಗಿದೆ.

ನಮ್ಮೊಂದಿಗೆ ಕೆಲಸ ಮಾಡಿ

ನಿಮ್ಮ ಕೌಶಲ್ಯಗಳು ಮತ್ತು ಉದ್ದೇಶಗಳಿಗೆ ತಕ್ಕ ಹುದ್ದೆಯನ್ನು ನಮ್ಮ ಹೊಸ ಉದ್ಯೋಗಾವಕಾಶಗಳ ಪಟ್ಟಿಯಲ್ಲಿ ಗಮನಿಸಿ.

ಈ ಅಂಕಿಅಂಶಗಳು ಏಪ್ರಿಲ್ 2025 ರವರೆಗಿನವು. ಇವುಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.