ಮಧ್ಯ ಪ್ರದೇಶದಲ್ಲಿ ನಮ್ಮ ಕೆಲಸವು 2011 ರಲ್ಲಿ ಪ್ರಾರಂಭವಾಯಿತು.
ನಾವು ಪ್ರಸ್ತುತ ಭೋಪಾಲ್, ದಮೋಹ್, ಧಾರ್, ಖಾರ್ಗೋನ್, ರೈಸೇನ್, ಸಾಗರ್, ಸೆಹೋರ್ ಮತ್ತು ವಿದಿಶಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೇವೆ.


ಶಿಕ್ಷಣ
ನಮ್ಮ ಕೆಲಸವು ಆರಂಭಿಕ ಬಾಲ್ಯ ಶಿಕ್ಷಣದಿಂದ (ECE) ಉನ್ನತ ಶಿಕ್ಷಣದವರೆಗೆ ವ್ಯಾಪಿಸಿದೆ. ನಾವು ಅಂಗನವಾಡಿ ಶಿಕ್ಷಕರು, ಶಿಕ್ಷಕರು, ಶಾಲಾ ಮುಖ್ಯಸ್ಥರು, ಅಧಿಕಾರಿಗಳು, ಕಾಲೇಜು ಅಧ್ಯಾಪಕರು ಮತ್ತು ರಾಜ್ಯ ಮಟ್ಟದ ಸಂಸ್ಥೆಗಳಾದ ರಾಜ್ಯ ಶಿಕ್ಷಣ ಕೇಂದ್ರ (RSK) ಮತ್ತು ಸಮಗ್ರ ಶಿಕ್ಷಣ ಅಭಿಯಾನದೊಂದಿಗೆ ತೊಡಗಿಸಿಕೊಂಡಿದ್ದೇವೆ.

31
ಶಿಕ್ಷಕ ಕಲಿಕಾ ಕೇಂದ್ರಗಳು
12,200+
ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
20,500 +
ಕ್ಕೂ ಹೆಚ್ಚು ಶಾಲಾ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು 2010ರಲ್ಲಿ ಸ್ಥಾಪಿಸಲಾಯಿತು. ಇದರ ಎರಡನೇ ಕ್ಯಾಂಪಸ್ ಅನ್ನು ಭೋಪಾಲ್‌ನಲ್ಲಿ ಸ್ಥಾಪಿಸಲಾಯಿತು. ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳು ಲಭ್ಯವಿವೆ.
ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್
ಅವಕಾಶವಂಚಿತ ಹಿನ್ನೆಲೆಯುಳ್ಳ ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವಾಗುವ ಉದ್ದೇಶದಿಂದ ಈ ಅನುಕ್ರಮವನ್ನು 2024ರಲ್ಲಿ ಪ್ರಾರಂಭಿಸಲಾಯಿತು. ಈ ವಿದ್ಯಾರ್ಥಿವೇತನವು ಈಗ ಮಧ್ಯ ಪ್ರದೇಶದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಲಭ್ಯವಿದೆ. 2024-25ರಲ್ಲಿ ಸುಮಾರು 18,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದರು.
ಆರೋಗ್ಯ
ನಾವು ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕೆಲಸವನ್ನು ಖಾರ್ಗೋನ್ ಜಿಲ್ಲೆಯ ಮಹೇಶ್ವರ್ ಬ್ಲಾಕ್‌ನಲ್ಲಿ, ಆರೋಗ್ಯ ಇಲಾಖೆಯೊಂದಿಗೆ ನಿಕಟ ಸಮನ್ವಯದೊಂದಿಗೆ 2025ರಲ್ಲಿ ಪ್ರಾರಂಭಿಸಿದೆವು. ನಾವು ಪ್ರಸ್ತುತ ಹಳ್ಳಿಗಳಲ್ಲಿ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಮತ್ತು ಉಪ-ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳ ಸೇವೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಪ್ರಯತ್ನ ಪಡುತ್ತಿದ್ದೇವೆ.

ಬಾಲವಾಡಿಗಳು
ನಾವು 2025ರಿಂದ ನಮ್ಮ ಸಹವರ್ತಿಗಳೊಂದಿಗೆ ಧಾರ್ ಬ್ಲಾಕ್‌ನಲ್ಲಿ ಏಳು ಬಾಲವಾಡಿಗಳನ್ನು ಪ್ರಾರಂಭಿಸಿದ್ದೇವೆ. ಇವುಗಳ ಮೂಲಕ, ಏಳು ತಿಂಗಳಿಂದ ಮೂರು ವರ್ಷದೊಳಗಿನ ದುರ್ಬಲ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ನಾವು ಶ್ರಮಿಸುತ್ತಿದ್ದೇವೆ.
ಇತರ ಕ್ಷೇತ್ರಗಳು
ಅನುದಾನಗಳು
ನಾವು ಮಧ್ಯ ಪ್ರದೇಶದಲ್ಲಿ 122 ಸಹವರ್ತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಸಂಸ್ಥೆಗಳು ಮಕ್ಕಳು, ದಿವ್ಯಾಂಜತೆ, ಲಿಂಗತ್ವ ನ್ಯಾಯ, ಆಡಳಿತ, ಹಾಗೂ ಭೂಮಿ, ನೀರು ಮತ್ತು ಅರಣ್ಯದಂತಹ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.
ನಮ್ಮೊಂದಿಗೆ ಕೆಲಸ ಮಾಡಿ
ನಿಮ್ಮ ಕೌಶಲ್ಯಗಳು ಮತ್ತು ಉದ್ದೇಶಗಳಿಗೆ ತಕ್ಕ ಹುದ್ದೆಯನ್ನು ನಮ್ಮ ಹೊಸ ಉದ್ಯೋಗಾವಕಾಶಗಳ ಪಟ್ಟಿಯಲ್ಲಿ ಗಮನಿಸಿ.
ಅಂಕಿಅಂಶಗಳನ್ನು ಏಪ್ರಿಲ್ 2026ರಲ್ಲಿ ಪಡೆಯಲಾಗಿದೆ. ಇವುಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುವುದು.
