ಪೌಷ್ಟಿಕತೆ

Health

ಮಗುವಿನ ಆರೋಗ್ಯ, ಕಲಿಕೆ ಮತ್ತು ಒಟ್ಟಾರೆ ಬೆಳವಣಿಗೆಯಲ್ಲಿ ಪೌಷ್ಟಿಕತೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ.

ಇದನ್ನು ಅರಿತು, ನಾವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಣ್ಣ ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಕಂಡುಬರುವ ತೀವ್ರ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸಲು ಕೆಲಸ ಮಾಡುತ್ತಿದ್ದೇವೆ.

ಗ್ರಾಮೀಣ ಮತ್ತು ತಲುಪಲು ದುಸ್ತರವಾದ ಪ್ರದೇಶಗಳಲ್ಲಿ, ಪೌಷ್ಟಿಕ ಆಹಾರ, ಅರಿವು ಮತ್ತು ಸೂಕ್ತ ಆರೈಕೆಗಳ ಕೊರತೆಯಿಂದಾಗಿ ಹಸುಗೂಸುಗಳು ಮತ್ತು ಎಳೆಯ ಮಕ್ಕಳು ಅಪೌಷ್ಟಿಕತೆಯಿಂದ ಉಂಟಾಗುವ ಸಮಸ್ಯೆಗಳನ್ನು ಅನುಭವಿಸುವ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಫೌಂಡೇಷನ್, ಸಮುದಾಯ-ಆಧಾರಿತ ಬಾಲವಾಡಿಗಳ ಜಾಲದ ಮೂಲಕ 7 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಸುರಕ್ಷಿತ ವಾತಾವರಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳನ್ನು (ರೆಫೆರಲ್‌ ಮೂಲಕ) ಒದಗಿಸುತ್ತದೆ. ಇದರೊಂದಿಗೆ ಅವರ ಕುಟುಂಬಗಳಿಗೆ ಮತ್ತು ಸ್ಥಳೀಯ ಜೀವನೋಪಾಯಕ್ಕೂ ಬೆಂಬಲ ನೀಡುತ್ತದೆ.

ಆರಂಭಿಕ ಬಾಲ್ಯದ ಹಂತದಲ್ಲಿನ ಕೆಲಸಕ್ಕೆ ಪೂರಕವಾಗಿ, ಫೌಂಡೇಷನ್ ಕರ್ನಾಟಕದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮೊಟ್ಟೆಗಳ ಲಭ್ಯತೆಗೆ ಸಹಕರಿಸುವ ಮೂಲಕ ಮಧ್ಯಾಹ್ನದ ಬಿಸಿಊಟದ ಯೋಜನೆಯನ್ನು ಬಲಪಡಿಸುತ್ತಿದೆ. ಈ ಮೂಲಕ ಶಾಲಾ ಮಕ್ಕಳ ಪೌಷ್ಟಿಕಾಂಶವನ್ನು ಹೆಚ್ಚಿಸಲು ಶ್ರಮಿಸುತ್ತಿದೆ.

ಒಟ್ಟಾರೆಯಾಗಿ, ಈ ಉಪಕ್ರಮಗಳು ಮಕ್ಕಳ ಆಹಾರದ ಗುಣಮಟ್ಟ, ಆರೋಗ್ಯದ ಸ್ಥಿತಿ ಮತ್ತು ಶೈಕ್ಷಣಿಕ ಸಿದ್ಧತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಇದು ಮಕ್ಕಳ ಒಟ್ಟಾರೆ ಬೆಳವಣಿಗೆ ಮತ್ತು ಕ್ಷೇಮಕ್ಕಾಗಿ ಬಲವಾದ ಅಡಿಪಾಯವನ್ನು ಹಾಕಿಕೊಡುತ್ತದೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.