ಈ ರೀತಿಯ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳು, ಶಿಕ್ಷಕ ಸಮುದಯದವರು ಬೋಧನಾ ವಿಧಾನ ಕುರಿತಾದ ಅರ್ಥಪೂರ್ಣ ಚರ್ಚೆಗಳ ಮೂಲಕ ಒಬ್ಬರಿಂದೊಬ್ಬರು ಕಲಿಯಲು ಮತ್ತು ಪರಸ್ಪರ ನೆರವಾಗಲು ಅನುವು ಮಾಡಿಕೊಡುತ್ತವೆ. ಅವು ರಾಜಾಸ್ಥಾನದ ಬಾಡ್ಮೇರ್‌ನ ಎಲ್ಲ ಬ್ಲಾಕ್‌ಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ನೆರವಾಗುವ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.