ನಾನು ಯಾವ ರೀತಿಯ ಅನುಭವಗಳನ್ನು ಪಡೆಯಬಹುದು?

ನೀವು ಶಾಲೆ ಮತ್ತು ಸಮುದಾಯದ ಕುರಿತಾಗಿ ನಿಮ್ಮ ಅನುಭವವನ್ನು ರೂಪಿಸಿಕೊಂಡು ಶಿಕ್ಷಣ ಕ್ಷೇತ್ರದ ಈ ಕೆಳಗಿನ ಆಯಾಮಗಳಿಗೆ ತೆರೆದುಕೊಳ್ಳುತೀರಿ.    

  • ತರಗತಿಯಲ್ಲಿ ಪಾಠ ಮಾಡುವುದು ಮತ್ತು ಕಲಿಯುವುದು. 
  • ಶಾಲೆ / ಹಳ್ಳಿಯ ಮಟ್ಟದಿಂದ ಪ್ರಾರಂಭಿಸಿ ಮೇಲಿನ ಹಂತಗಳನ್ನು ಗಮನಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಅರ್ಥಮಾಡಿಕೊಳ್ಳುವುದು. 
  • ಶಾಲೆಯನ್ನು ಒಂದು ವ್ಯವಸ್ಥೆಯ ಭಾಗವಾಗಿ ನೋಡಿ, ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು 
  • ಶಾಲೆಯು ಸಮುದಾಯ ಮತ್ತು ಸ್ಥಳೀಯ ಆಡಳಿತದೊಂದಿಗೆ ಹೊಂದಿರುವ ಅಂತರ್-ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು. 
  • ಶಿಕ್ಷಣ ವ್ಯವಸ್ಥೆಯ ಆಡಳಿತ, ಆಡಳಿತ ಸಂರಚನೆಗಳನ್ನು ಅರ್ಥಮಾಡಿಕೊಳ್ಳುವುದು. ಮತ್ತು ರಾಜ್ಯ/ಜಿಲ್ಲೆಯ ವಿವಿಧ ಇಲಾಖೆಗಳೊಂದಿಗೆ ಕೆಲಸ ಮಾಡುವುದು. 
  • ಅಭ್ಯಾಸದಲ್ಲಿ ತೊಡಗಿರುವ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ವ್ಯವಸ್ಥಿತವಾದ ಪ್ರಕ್ರಿಯೆಯ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು, ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದು. 

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.