ಮೂಲಪುಟ » ಸಂದರ್ಶನ ಪ್ರಕ್ರಿಯೆ ಹೇಗಿರುತ್ತದೆ ಮತ್ತು ನಾನು ಹೇಗೆ ತಯಾರಾಗಬಹುದು?
ಸಂದರ್ಶನ ಪ್ರಕ್ರಿಯೆ ಹೇಗಿರುತ್ತದೆ ಮತ್ತು ನಾನು ಹೇಗೆ ತಯಾರಾಗಬಹುದು?
ಬೋಧಕ ಮತ್ತು ಬೋಧಕೇತರ ಪಾತ್ರಗಳಿಗೆ ಸಂದರ್ಶನ ಪ್ರಕ್ರಿಯೆಯು ಭಿನ್ನವಾಗಿರುತ್ತದೆ. ನಿಮ್ಮ ಅರ್ಜಿಯು ಮುಂದಿನ ಹಂತಕ್ಕೆ ಹೋಗಿದ್ದರೆ, ಪ್ರಕ್ರಿಯೆಯ ಕುರಿತು ನಿಮಗೆ ತಿಳಿಸಲಾಗುವುದು.
ಯಾವುದೇ ಉದ್ಯೋಗಾವಕಾಶದ ಪ್ರಕಟಣೆಯ ಕುರಿತ ಮಾಹಿತಿಗಾಗಿ ನೀವು ವಿಶ್ವವಿದ್ಯಾಲಯದ ಉದ್ಯೋಗಾವಕಾಶಗಳ ಪ್ರಕಟಣೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬಹುದು (https://azimpremjiuniversity.edu.in/jobs). ಪ್ರತಿಯೊಂದು ಉದ್ಯೋಗಾವಕಾಶದ ಪ್ರಕಟಣೆಯೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಜೊತೆಗೆ, ಕೆಲಸದ ಸ್ಥಳ, ಕೆಲಸದ ಬಗೆ, ಪಾತ್ರ, ಪ್ರಾವೀಣ್ಯತೆಯ ಕ್ಷೇತ್ರ, ಕೆಲಸದ ವಿವರಣೆ ಮತ್ತು ಅವಶ್ಯಕತೆಗಳು, ಮತ್ತು ಅವಶ್ಯವಿರುವ ದಾಖಲೆಗಳನ್ನೂ ಕೂಡ ನಮೂದಿಸಲಾಗಿರುತ್ತದೆ. ತದನಂತರ ಕೊಟ್ಟಿರುವ ಇಮೇಲ್ ಐಡಿಗೆ ನೀವು ಅಗತ್ಯ ದಾಖಲೆಗಳನ್ನು ಕಳುಹಿಸಿದರೆ, ಅದನ್ನು ತಂಡವು ಪರಿಶೀಲಿಸುತ್ತದೆ.