2002-2004
ಕ್ಷಿಪ್ರ ಕಲಿಕಾ ಕಾರ್ಯಕ್ರಮ
ಶಿಕ್ಷಣದ ಗುಣಮಟ್ಟವು ಬೋಧನೆ ಹಾಗೂ ಮಾರ್ಗದರ್ಶನದ ಲಭ್ಯತೆಯ ಮೇಲೆ ಅಪಾರವಾಗಿ ಅವಲಂಬಿಸಿರುತ್ತದೆ. ಈಶಾನ್ಯ ಕರ್ನಾಟಕದ 16 ಬ್ಲಾಕ್ ಗಳ 1029 ಶಾಲೆಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಸುಧಾರಿಸಲು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಗುರುತಿಸುವ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಕಾಪಾಡಲು ಅವರಿಗೆ ನೆರವು ನೀಡುವಂತಹ ಶಿಕ್ಷಕರನ್ನು ನಿಯೋಜಿಸುವ ಒಂದು ತೀವ್ರವಾದ ಪ್ರಕ್ರಿಯೆಯನ್ನು ನಾವು ಕೈಗೊಂಡೆವು.ದಿಲೀಪ್ ರಾಂಜೇಕರ್ ಅವರ ಲೇಖನ: ದಿ ಲಿಮಿಟ್ಸ್ ಆಫ್ ಬೆಸ್ಟ್ ಪ್ರಾಕ್ಟಿಸಸ್ (ಉತ್ತಮ ಅಭ್ಯಾಸಗಳ ಮಿತಿಗಳು)ಆ್ಯಕ್ಸಲರೇಟೆಡ್ ಲರ್ನಿಂಗ್ ಪ್ರೋಗ್ರಾಮ್ (ಕ್ಷಿಪ್ರ ಕಲಿಕಾ ಕಾರ್ಯಕ್ರಮ ) ಆನ್ ಎಂಡ್ ಲೈನ್ ಇವ್ಯಾಲ್ಯೂಯೇಷನ್ ಸ್ಟಡಿ (ಅಂತಿಮ ಮೌಲ್ಯಮಾಪನದ ಅಧ್ಯಯನ) ಲರ್ನಿಂಗ್ ಕರ್ವ್, ಸಂಚಿಕೆ 1, ನವೆಂಬರ್ 2003:
2007 – ಇಲ್ಲಿಯವರೆಗೂ
ಇಲ್ಲಿಯವರೆಗೂ: ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ
ಉದ್ಯೋಗವನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವಂತಹ ವಲಸೆ ಕಾರ್ಮಿಕರ ಮಕ್ಕಳು, ತಮ್ಮ ಪೋಷಕರ ಉದ್ಯೋಗಗಳ ಸ್ವರೂಪದಿಂದಾಗಿ ಶಿಕ್ಷಣವನ್ನು ಪಡೆಯುವಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಹಾಗೂ ಮೇಲ್ಸೇತುವೆಗಳ ಕೆಳಗೆ ತಾತ್ಕಾಲಿಕ ಮನೆಗಳಲ್ಲಿ ಬದುಕುವಂತಹ ಸ್ಥಿತಿಗೆ ತಳ್ಳಲ್ಪಡುವಂತಹ ಅಸಂಖ್ಯಾತ ಮಕ್ಕಳು, ಮೂಲಭೂತ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳದೆಯೇ ಬೆಳೆಯುತ್ತಾರೆ. ನಮ್ಮ ಫೌಂಡೇಷನ್, ಇಂತಹ ಮಕ್ಕಳನ್ನೂ ಒಳಗೊಳ್ಳುವಂತಹ ಪಠ್ಯಕ್ರಮವನ್ನು ರೂಪಿಸುವ ಮೂಲಕ, ಎಲ್ಲ ಮಕ್ಕಳನ್ನೂ- ಅವರ ಸಾಮರ್ಥ್ಯ ಎಷ್ಟೇ ಇರಲಿ- ಶಾಲಾ ಶಿಕ್ಷಣದ ಪರಿಧಿಯೊಳಗೆ ತರಲು ಬಯಸುತ್ತದೆ.ಇಂಗ್ಲಿಷ್: ವಲಸೆ ಕಾರ್ಮಿಕರ ಮಕ್ಕಳಿಗೆ ಅವಕಾಶಗಳುಹಿಂದಿ: ವಲಸೆ ಕಾರ್ಮಿಕರ ಮಕ್ಕಳಿಗೆ ಅವಕಾಶಗಳುಕಲಿಯಲು ಅವಕಾಶಗಳು ಮತ್ತು ಸ್ವಾತಂತ್ರ್ಯ (ಭಾರತ) - ಯುನೆಸ್ಕೊ2004-2013
ಆಂಧ್ರಪ್ರದೇಶ ರ್ಯಾಂಡಮೈಸ್ಡ್ ಇವ್ಯಾಲ್ಯೂಯೇಷನ್ ಸ್ಟಡೀಸ್
ಈ ಯೋಜನೆಗಾಗಿ, ನಾವು ಪ್ರಿನ್ಸ್ ಟನ್ ಯೂನಿವರ್ಸಿಟಿಯ ಅರ್ಥಶಾಸ್ತ್ರಜ್ಞರು ಹಾಗೂ ವಿಶ್ವಬ್ಯಾಂಕ್ನ ಅಭಿವೃದ್ಧಿ ಆರ್ಥಿಕತೆಯ ಸಂಶೋಧನಾ ತಂಡದ (ವರ್ಲ್ಡ್ ಬ್ಯಾಂಕ್ ಡೆವಲಪ್ಮೆಂಟ್ ಎಕನಾಮಿಕ್ಸ್ ರಿಸರ್ಚ್) ಆರ್ಥಿಕ ತಜ್ಞರೊಂದಿಗೆ ಕೆಲಸ ಮಾಡಿ ಸರಣಿ ಮೌಲ್ಯಮಾಪನಗಳನ್ನು ಕೈಗೊಂಡೆವು. ಗ್ರಾಮೀಣ ಭಾರತದ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸುವುದು ನಮ್ಮ ಉದ್ದೇಶವಾಗಿತ್ತು. ನಾವು ಹೆಚ್ಚುವರಿ ಶಿಕ್ಷಕರನ್ನು ಹಾಗೂ ತರಗತಿಯ ಪರಿಕರಗಳಿಗಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಿದೆವು ಹಾಗೂ ವಿದ್ಯಾರ್ಥಿಗಳ ಕಲಿಕೆ ಹಾಗೂ ಹಾಜರಾತಿಯ ಮೇಲೆ ಆರೋಗ್ಯದ ಪಾತ್ರವನ್ನು ಅಧ್ಯಯನ ಮಾಡಿದೆವು.ಅವಕಾಶವಂಚಿತ ಸಮುದಾಯಗಳಿಂದ ಬರುವ ಗ್ರಾಮೀಣ ಮಕ್ಕಳಿಗೆ ಶಾಲೆಯ ಆಯ್ಕೆಯು ಸಹಾಯ ಮಾಡುವುದೇ?2003-2010
ನಮ್ಮ ಶಾಲೆ
ಗ್ರಾಮೀಣ ಶಾಲಾ ವ್ಯವ‘ಅಸಮಾನ ಭಾಗೀದಾರರನ್ನು’ ಒಂದು ಸಾಮಾನ್ಯ ವೇದಿಕೆಯ ಮೇಲೆ ಒಟ್ಟಿಗೆ ತರಲು ಹಾಗೂ ಸಾಂಸ್ಥಿಕ ಯೋಜನೆಯ ಮೂಲಕ ಗುಣಾತ್ಮಕ ಬದಲಾವಣೆಯನ್ನು ತರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮುದಾಯದ ಸದಸ್ಯರನ್ನು ಒಳಗೊಳ್ಳಲು ಈ ಕ್ರಿಯೆ-ಆಧಾರಿತ ಸಂಶೋಧನೆಯನ್ನು ರೂಪಿಸಲಾಗಿತ್ತುಇಂಗ್ಲಿಷ್: ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲಾ ಸಮುದಾಯದೊಂದಿಗೆ ಸಂಬಂಧ ಬೆಸೆಯುವುದುಕನ್ನಡ: ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲೆ ಮತ್ತು ಸಮುದಾಯ2001-2008
ಕಂಪ್ಯೂಟರ್-ಏಡೆಡ್ ಲರ್ನಿಂಗ್ ಪ್ರೋಗ್ರಾಮ್
ಗ್ರಾಮೀಣ ಪ್ರದೇಶಗಳ ಜನರು ಹಾಗೂ ಅವರ ಶೈಕ್ಷಣಿಕ ಆಕಾಂಕ್ಷೆಗಳ ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ, ಕರ್ನಾಟಕದ 27 ಜಿಲ್ಲೆಗಳಾದ್ಯಂತ ನಾವು ಕಂಪ್ಯೂಟರ್-ನೆರವಿನ ಕಲಿಕಾ ಕೇಂದ್ರಗಳನ್ನು ಆರಂಭಿಸಿದೆವು. ಈ ಕೇಂದ್ರಗಳು ಉಚಿತ ಕಂಪ್ಯೂಟರ್ ಪಾಠಗಳನ್ನು ಹಾಗೂ ಶೈಕ್ಷಣಿಕ ಸಿಡಿಗಳನ್ನು 225 ಶಾಲೆಗಳ ವಿದ್ಯಾರ್ಥಿಗಳಿಗೆ ಒದಗಿಸಿದವು.ಕಂಪ್ಯೂಟರ್-ನೆರವಿನ ಕಲಿಕಾ ಕಾರ್ಯಕ್ರಮವನ್ನು ಸುಸ್ಥಿರಗೊಳಿಸುವುದು ಹೇಗೆ ಸಿಎಎಲ್ಪಿ ಕುರಿತು ಒಂದು ಅಧ್ಯಯನ: ಸಿ ಎ ಎಲ್ ಪಿ ಕುರಿತು ಒಂದು ಅಧ್ಯಯನ: ಕಂಪ್ಯೂಟರ್ ನೆರವಿನ ಕಲಿಕಾ ಕಾರ್ಯಕ್ರಮ: ಕರ್ನಾಟಕದಲ್ಲಿ ಒಂದು ದೀರ್ಘಕಾಲೀನ ಅಧ್ಯಯನ: ಒಂದು ಗುಣಾತ್ಮಕ ವರದಿ:2002-2008
ಕಲಿಕಾ ಖಾತ್ರಿ ಕಾರ್ಯಕ್ರಮ
2002 ರಲ್ಲಿ ಕಲಿಕಾ ಖಾತ್ರಿ ಕಾರ್ಯಕ್ರಮದ ಮೂಲಕ ನಾವು ಈಶಾನ್ಯ ಕರ್ನಾಟಕದ 1, 903 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರವೇಶ,ಹಾಜರಾತಿ ಹಾಗೂ ಕಲಿಕಾ ಫಲಗಳತ್ತ ಒಂದು ವಿಮರ್ಶಾತ್ಮಕ ಅವಲೋಕನವನ್ನು ಕೈಗೊಂಡೆವು. ವಿದ್ಯಾರ್ಥಿಗಳು-ಶಿಕ್ಷಕರ ಮಧ್ಯದ ಸಂಬಂಧವು ತರಗತಿಯಲ್ಲಿನ ಕಲಿಕಾ ಮಟ್ಟವು ಆಶಾದಾಯಕವಾಗಿರುವಂತೆ ಖಚಿತಪಡಿಸುವ ಒಂದು ಮುಖ್ಯವಾದ ಅಂಶ ಎನ್ನುವುದರ ಕಡೆಗೆ ನಾವು ನೀಡುವ ಒತ್ತನ್ನು ಈ ಫಲಿತಾಂಶಗಳು ಮತ್ತಷ್ಟು ದೃಢೀಕರಿಸಿದವು.ಕಲಿಕಾ ಖಾತ್ರಿ ಕಾರ್ಯಕ್ರಮʼದಿಂದ ಆದ ಕಲಿಕೆಗಳುವಿದ್ಯಾರ್ಥಿ ಶಿಕ್ಷಕ ಅನುಪಾತದ ಪ್ರಾಮೂಖ್ಯತೆಯಶಸ್ವಿ ಶಾಲೆಗಳನ್ನು ಪ್ರತ್ಯೇಕಿಸುವ ಅಂಶಗಳುಎಸ್ ಗಿರಿಧರ್ ಅವರ ಲೇಖನ: ಕಲಿಕಾ ಖಾತ್ರಿ2004-2011
ಬಾಲಸ್ನೇಹಿ ಶಾಲಾ ಉಪಕ್ರಮ
ಇದು, ಮಕ್ಕಳಿಗೆ ಒಂದು ಸುರಕ್ಷಿತವಾದ, ಆರೋಗ್ಯಕರವಾದ, ಶುಚಿಯಾದ ಹಾಗೂ ಸಂತೋಷದ ವಾತಾವರಣವನ್ನು ಒದಗಿಸುವ ಮೂಲಕ ಅವರ ಕಲಿಕೆಯ ಮಟ್ಟವನ್ನು ಬೆಳೆಸಲು ಹಾಗೂ ಸುಧಾರಿಸಲು ಮಾಡಿದ ಒಂದು ಪ್ರಯತ್ನ. ಈ ಕಾರ್ಯಕ್ರಮವನ್ನು ಯುನಿಸೆಫ್ನ ಸಹಯೋಗದೊಂದಿಗೆ, ವಿದ್ಯಾರ್ಥಿಗಳ ಕುಟುಂಬಗಳು, ಸಮುದಾಯಗಳು ಹಾಗೂ ಮಕ್ಕಳ ಶಾಲಾ ಶಿಕ್ಷಣದಲ್ಲಿ ತೊಡಗಿದ ಶೈಕ್ಷಣಿಕ ಅಧಿಕಾರಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಕೈಗೊಳ್ಳಲಾಗಿತ್ತು.ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಒಂದು ಹೆಜ್ಜೆ, ‘ನಲಿ-ಕಲಿ’:ಸಿ ಎಫ್ ಎಸ್ ಐ: ಭಾಗೀದಾರರ ದೃಷ್ಟಿಕೋನದ ಪ್ರಕ್ರಿಯೆಯ ಒಂದು ದಾಖಲೆनली-कली|सभी के लिए गुणवत्तापूर्ण शिक्षा की ओर एक क़दमಉಮಾಶಂಕರ್ ಪೆರಿಯೋಡಿ ಯವರ ದಿ ಚೈಲ್ಡ್ ಫ್ರೆಂಡ್ಲಿ ಸ್ಕೂಲ್ ಇನಿಶಿಯೇಟಿವ್ ಜರ್ನಿ (ಬಾಲಸ್ನೇಹಿ ಶಾಲಾ ಉಪಕ್ರಮದ ಪ್ರಯಾಣ)